ಬಿಎಸ್ ವೈ ವಿರುದ್ಧ ಉಗ್ರಪ್ಪ ಕಿಡಿ

ugrappa allegation on yeddyurappa

21-12-2017

ಬೆಳಗಾವಿ: ಮಹದಾಯಿ ವಿವಾದ ಮಾತುಕತೆಗೆ ವಿರೋಧ ಪಕ್ಷದವರನ್ನು ಮಾತುಕತೆಗೆ ಕರೆದುಕೊಂಡು ಬರಲೇಬೇಕು ಅಂತಾ ಯಡಿಯೂರಪ್ಪ ಪಟ್ಟು ಹಿಡಿದಿದ್ದರು, ಮಹದಾಯಿ ನೀರು ಬಿಡಿಸದೆ ರಾಜ್ಯಕ್ಕೆ ತಲೆ ಇಡಲ್ಲ ಅಂತಿದ್ದರು, ಈಗ ಚುನಾವಣೆ ಕಾರಣಕ್ಕೆ ನೀರಿನ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ವಿರುದ್ಧ  ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ. ಅಂತಾರಾಜ್ಯ ನೀರಿನ ವಿವಾದಕ್ಕೆ ಮಧ್ಯಸ್ಥಿಕೆ ವಹಿಸಲು ಯಾವುದೇ ಪಕ್ಷಾಧ್ಯಕ್ಷರಿಗೆ ಅವಕಾಶವಿಲ್ಲ, ಈ ಕುರಿತು ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸಬೇಕು, ಯಡಿಯೂರಪ್ಪ ಈಗಲೂ ತಮ್ಮೆಲ್ಲಾ ಶಕ್ತಿ ಬಳಸಿ ಪ್ರಧಾನಿಯವರನ್ನು ಮಧ್ಯಸ್ಥಿಕೆಗೆ ಒಪ್ಪಿಸಿ, ಹಾಗೆ ಮಾಡಿದರೆ ಮಾತ್ರ ರಾಜ್ಯದ ಜನ ಯಡಿಯೂರಪ್ಪ ನವರಿಗೆ ಶಹಬಾಷ್ ಎನ್ನುತ್ತಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

V.S.Ugrappa Yeddyurappa ರಾಜಕಾರಣ ಮಹದಾಯಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ