‘ಅಮಿತ್ ಷಾ ಸಭೆ ಬಗ್ಗೆ ನಾನು ಮಾತನಾಡಲ್ಲ’21-12-2017 664

ನವದೆಹಲಿ: ಮಹಾದಾಯಿ ವಿವಾದದಲ್ಲಿ ಗೋವಾದಿಂದ‌ ಮತ್ತೆ ಕ್ಯಾತೆ ವಿಚಾರಕ್ಕೆ ಸಂಬಂಧಿಸಿದಂತೆ, ಲೋಕಸಭೆಯ ಪ್ರತಿಪಕ್ಷದ ನಾಯಕ ಹಾಗು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಕ್ರಿಯಿಸಿದ್ದು, ಮೊದಲಿನಿಂದಲೂ ಬಿಜೆಪಿ ಮಹಾದಾಯಿ ಬಗ್ಗೆ ಏನೂ ಮಾಡಿಲ್ಲ, ಈ ಕುರಿತು ಕೇವಲ ಕರ್ನಾಟಕ‌ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ದೂರಿದ ಖರ್ಗೆ, ಮನೋಹರ ಪರಿಕ್ಕರ್ ಅವರಿಂದ‌ ಯಾರಿಗೂ ಪ್ರಯೋಜನವಿಲ್ಲ, ನಾವು ನಮ್ಮ ನೀರನ್ನು ಕೇಳುತ್ತಿದ್ದೇವೆ, ಆ ನೀರು ಕೊಡಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಬೇಕು, ಆದರೆ ಕೇಂದ್ರ ಸರ್ಕಾರ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ. ಅಮಿತ್ ಷಾ ರೊಂದಿಗೆ ನಡೆದ ಸಭೆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ, ಅವರು ಯಾರೊಂದಿಗೆ ಬೇಕಾದರೂ ಚರ್ಚೆ ಮಾಡಲಿ ಎಂದು ಹೇಳಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ