ಕಾಮುಕನಿಗೆ ಬಿತ್ತು ಸಖತ್ ಗೂಸ

A man beaten by womens

21-12-2017

ದಾವಣಗೆರೆ: ಮಹಿಳೆಯರನ್ನು ಚುಡಾಯಿಸುತ್ತಿದ್ದ ಕಾಮುಕನಿಗೆ ಮಹಿಳೆಯರೇ ಸರಿಯಾಗಿ ನಾಲ್ಕು ಬಿಗಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ರೋಗಿ ಜೊತೆಗಿದ್ದ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಕಾಮುಕನಿಗೆ ಸಖತ್ತಾಗೇ ಚಳಿ ಬಿಡಿಸಿದ್ದಾರೆ. ಆಸ್ಪತ್ರೆಯಲ್ಲಿ ಅಲ್ಲಲ್ಲಿ ಒಡಾಡುತ್ತಿದ್ದ ವ್ಯಕ್ತಿಯೊಬ್ಬ ಮಹಿಳೆಯರೊಂದಿಗೆ ಅನೂಚಿತವಾಗಿ ವರ್ತಿಸಿದ್ದಾನೆ, ಈ ವೇಳೆ ಆತನ ವರ್ತನೆಗೆ ಗಾಭರಿಯಾದ ಮಹಿಳೆಯರು, ಜಗಳ ಮಾಡಿ ಬುದ್ಧಿ ಹೇಳಿ ಬಿಟ್ಟಿದ್ದರು. ಆದರೆ ಕಾಮುಕನ ಚಾಳಿ ಮುಂದುವರೆದಿದ್ದು, ಈತನ ವರ್ತನೆಯಿಂದ ರೋಸಿದ ಮಹಿಳೆಯರು ಸೆಕ್ಯೂರಿಟಿ ಗಾರ್ಡ್ ಗೆ ಕಂಪ್ಲೇಂಟ್ ನೀಡಿ, ಕಾಮುಕನನ್ನು ಹಿಡಿದು ಸರಿಯಾಗಿ ಗೂಸ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾಮುಕನ ಗುರುತು ಪತ್ತೆಯಾಗಿದಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Sexual harassment District hospital ಕಾಮುಕ ಆಸ್ಪತ್ರೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ