‘ವಡ್ನಾಳ್ ರಾಜಣ್ಣ ಕೊನೇ ಚುನಾವಣೆ’21-12-2017

ದಾವಣಗೆರೆ: 2018 ರ ವಿಧಾನಸಭಾ ಚುನಾವಣೆಯೇ ನನ್ನ ಕೊನೇ ಚುನಾವಣೆ ಎಂದು ಶಾಸಕ ವಡ್ನಾಳ್ ರಾಜಣ್ಣ ಘೋಷಿಸಿದ್ದಾರೆ. ಚುನಾವಣೆಗೂ ಮುನ್ನವೇ ರಾಜಕೀಯ ಗಿಮಿಕ್ ಶುರು ಮಾಡಿರುವ ವಡ್ನಾಳ್ ರಾಜಣ್ಣ, 2023 ರಲ್ಲಿ ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ. ವಡ್ನಾಳ್ ರಾಜಣ್ಣ ದಾವಣಗೆರೆ ಜಿಲ್ಲೆಯ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

ಚುನಾವಣೆ ಘೋಷಣೆಗೂ ಮುನ್ನವೇ ತಾಲ್ಲೂಕಿನಾದ್ಯಂತ ಇದು ನನ್ನ ಕೊನೆಯ ಚುನಾವಣೆ, ನನ್ನನ್ನು ಗೆಲ್ಲಿಸಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೆ ಹರಪನಹಳ್ಳಿ ಶಾಸಕ ಎಂ.ಪಿ.ರವೀಂದ್ರ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಎಂದು ಘೋಷಿಸಿದ್ದರೂ ಕೂಡ, ತಾಯಿ ಮತ್ತು ಸಿಎಂ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸುವಂತೆ ಹೇಳಿದ್ದಾರೆ ಅಂತ ಉಲ್ಟಾ ಹೊಡೆದಿದ್ದರು.

ಈಗ ಚನ್ನಗಿರಿ ಶಾಸಕ ವಡ್ನಾಳ್ ರಾಜಣ್ಣ ಕೂಡ ಇದೇ ಕಡೆಯ ಚುನಾವಣೆ ಅಂತಿದ್ದಾರೆ, 5 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ, ಈ ಅವಧಿಯಲ್ಲೇ ಅಂದುಕೊಂಡಿದ್ದ ಕೆಲಸಗಳು ಪೂರ್ಣಗೊಂಡಿದಿದ್ದರೆ ಚುನಾವಣೆಗೆ ಸ್ಪರ್ಧಿಸುತ್ತಿರಲಿಲ್ಲ, ಇನ್ನಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಇವೆ.  2018 ರಿಂದ 2023 ರೊಳಗೆ ಪೂರ್ಣಗೊಳಿಸಿ ಚುನಾವಣಾ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ. ಚನ್ನಗಿರಿ ರಾಜಕೀಯ ಇತಿಹಾಸದಲ್ಲಿ ಒಮ್ಮೆ ಅಧಿಕಾರ ಕೊಟ್ಟ ಮತದಾರರು ಮತ್ತೊಮ್ಮೆ ಕೊಡೋದಿಲ್ಲ ಅನ್ನೋ ಮಾತಿದೆ, ಅದನ್ನು ಬ್ರೇಕ್ ಮಾಡಲು ಈ ಬಾರಿಯೂ ಚುನಾವಣೆಯಲ್ಲಿ ಗೆದ್ದು, 2023ಕ್ಕೆ ಕಾರ್ಯಕರ್ತನಾಗಿ ದುಡಿತೀನಿ ಎಂದು ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ