ಬಿಜೆಪಿ ಪ್ರಣಾಳಿಕೆಗೆ ಭರ್ಜರಿ ಪ್ಲಾನ್

BJP manifesto plan

21-12-2017

ಬೆಂಗಳೂರು: ಜನವರಿ 28ರ ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆಗೊಳಿಸಲು ರಾಜ್ಯ ಬಿಜೆಪಿ ಪ್ಲಾನ್ ಮಾಡುತ್ತಿದೆ ಎನ್ನಲಾಗಿದೆ, ಪ್ರಧಾನಿ ನರೇಂದ್ರ ಮೋದಿಯಿಂದ ಪ್ರಣಾಳಿಕೆ ಬಿಡುಗಡೆಗೊಳಿಸಲು ಚಿಂತನೆ ನಡೆಸಿದ್ದು, ಪ್ರಣಾಳಿಕೆ ಬಗ್ಗೆ ಮೋದಿಗೆ ವಿವರಣೆ ನೀಡಲು ಭರ್ಜರಿ ಸಿದ್ಧತೆ ನಡೆಸಿದೆ. ಈ ಬಾರಿ ಎರಡು ಪ್ರಣಾಳಿಕೆ ಬಿಡುಗಡೆಗೆ, ಬಿಜೆಪಿ ಪ್ರಣಾಳಿಕೆ ರಚನೆ ಸಮಿತಿ ತಂಡ ತೀರ್ಮಾನಿಸಿದ್ದು, ರಾಜ್ಯಮಟ್ಟಕ್ಕೊಂದು ಮತ್ತು ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಪ್ರಣಾಳಿಕೆ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಪ್ರಮುಖ ಸಮಸ್ಯೆಗಳ ನಿವಾರಣೆಗೆ ಪ್ರಣಾಳಿಕೆಯಲ್ಲಿ ಅಂಶಗಳಿರಲಿವೆ ಎಂದು ತಿಳಿದು ಬಂದಿದೆ. ಈ ಕುರಿತು ಪ್ರಣಾಳಿಕೆ ರಚನಾ ಸಮಿತಿ ತಂಡ ಸಮಗ್ರವಾಗಿ ಪ್ರಮುಖ ಅಂಶಗಳನ್ನು ಕಲೆ ಹಾಕುತ್ತಿದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕಾರ್ಯಕರ್ತರ ಹತ್ಯೆ ವಿಚಾರವಾಗಿ, ವಿಶೇಷ ಅಪರಾಧ ತಡೆ ಘಟಕ ರಚಿಸಿ, ಪ್ರಕರಣಗಳ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮೋದಿಗೆ ವಿವರಣೆ ನೀಡುವುದಾಗಿಯೂ ತಿಳಿದು ಬಂದಿದೆ.

 


ಸಂಬಂಧಿತ ಟ್ಯಾಗ್ಗಳು

manifesto Krnataka BJP ಪ್ರಣಾಳಿಕೆ ಕರಾವಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ