ರೈಲಿಗೂ ಒಂದು ಯೂನಿವರ್ಸಿಟಿ

Cabinet approves 1st National Rail and Transport University

21-12-2017

ದೇಶದ ಮೊದಲ ರಾಷ್ಟ್ರೀಯ ರೈಲು ಮತ್ತು ಸಂಚಾರ ವಿಶ್ವವಿದ್ಯಾಲಯದ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅಂಗೀಕಾರ ನೀಡಿದೆ. ಗುಜರಾತ್ ರಾಜ್ಯದ ವಡೋದರದಲ್ಲಿ ಆರಂಭವಾಗಲಿರುವ ಈ ರೈಲು ವಿಶ್ವವಿದ್ಯಾಲಯದಲ್ಲಿ, ಭಾರತೀಯ ರೈಲ್ವೆಯ ಸಾಮರ್ಥ್ಯ, ಸುರಕ್ಷತೆ ಮತ್ತು ಸೇವೆಗಳನ್ನು ಅತ್ಯುತ್ತಮ ಮಟ್ಟಕ್ಕೆ ಕೊಂಡೊಯ್ಯುವ  ಕೌಶಲ್ಯ ಅಥವ ನೈಪುಣ್ಯತೆ ಹೊಂದಿರುವ ಯುವ ವೃತ್ತಿಪರರನ್ನು ಸಿದ್ಧಪಡಿಸಲಾಗುತ್ತದೆ. ಇದರ ಜೊತೆಗೆ, ನವ ಭಾರತದ ಸಂಚಾರ ವ್ಯವಸ್ಥೆಯ ರೂಪಾಂತರಕ್ಕೆ ಕೊಡುಗೆ ನೀಡುವ ಸಂಸ್ಥೆಯಾಗಿಯೂ ಈ ಹೊಸ ವಿಶ್ವವಿದ್ಯಾಲಯ ರೂಪುಗೊಳ್ಳಲಿದೆ. 2018ರ ಜುಲೈ ವೇಳೆಗೆ ಈ ವಿಶ್ವ ವಿದ್ಯಾಲಯ ತನ್ನ ಶೈಕ್ಷಣಿಕ ಕಾರ್ಯಕ್ರಮ ಆರಂಭಿಸಲಿದೆ.

‘ಮೇಕ್ ಇನ್ ಇಂಡಿಯ’ ಅನ್ನುವುದನ್ನು ಮೂಲಾಧಾರವಾಗಿರಿಸಿಕೊಂಡು, ಜಾಗತಿಕ ಪಾಲುದಾರಿಕೆಯನ್ನೂ ಜೊತೆಗೆ ಸೇರಿಸಿಕೊಂಡು, ಭಾರತೀಯ ರೈಲ್ವೆಯನ್ನು ಆಧುನೀಕರಣದ ಮಾರ್ಗದಲ್ಲಿ ಚಲಿಸುವಂತೆ ಮಾಡುವ ಉದ್ದೇಶ ಹೊಂದಿರುವ ಈ ರೈಲು ವಿಶ್ವವಿದ್ಯಾಲಯ, ಸಂಚಾರ ಕ್ಷೇತ್ರದಲ್ಲಿ ಭಾರತವನ್ನು ವಿಶ್ವದ ಅಗ್ರಗಣ್ಯ ದೇಶವನ್ನಾಗಿಸುವತ್ತ ಹೆಜ್ಜೆ ಹಾಕುತ್ತದೆ ಎಂಬ ಆಶಯ ಇರಿಸಿಕೊಳ್ಳಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ