‘ಪರೀಕ್ಷಾ ಅಕ್ರಮಕ್ಕೆ ಅವಕಾಶವಿಲ್ಲ’

Tanveer Sait press meet

20-12-2017

ಬೆಂಗಳೂರು: ಪಿಯು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿಚ ತನ್ವೀರ್ ಸೇಠ್ ಅವರು, ಮಲ್ಲೇಶ್ವಂ ನ ಪಿಯು ಮಂಡಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದು, ಈಗಾಗಲೇ ಪರೀಕ್ಷೆಗಳ ಅಂತಿಮ ವೇಳಾ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಬಾರಿ ಪ್ರಶ್ನೆ ಪತ್ರಿಕೆ ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ, ಶಾಲೆಗಳ 36000 ಕೊಠಡಿ ದುರಸ್ತಿಗೆ ಈವರೆಗೆ 566 ಕೋಟಿ ಬಿಡುಗಡೆ ಮಾಡಿದ್ದು, 30 ಕೋಟಿ ಉರ್ದು ಶಾಲೆಗಳಿಗೆ ನೀಡಲಾಗಿದೆ ಎಂದರು. ಅಲ್ಲದೇ 176 ಶಿಕ್ಷಣ ಸಂಕೀರ್ಣ ತೆರೆಯಲಾಗುತ್ತಿದೆ ಎಂದು ತಿಳಿಸಿದರು.

ಇನ್ನು10 ಸಾವಿರ ಶಿಕ್ಷಕರ ನೇಮಕಾತಿಗೆ ಮುಂದಾಗಿದ್ದೇವೆ ಎಂದು ಮಾಹಿತಿ ನೀಡಿದ್ದು, ಟಿಇಟಿ ಪರೀಕ್ಷೆ ಜನವರಿ ಅಂತ್ಯದೊಳಗೆ ನಡೆಯಲಿದೆ, ಈ ಬಾರಿ 10,000 ಸಾವಿರ ಶಿಕ್ಷಕರಿಗೆ ವಿದ್ಯಾರ್ಹತೆ ಆಧಾರದ ಮೇಲೆ, ಪರೀಕ್ಷೆ ನಡೆಸಿ ಬಡ್ತಿ ನೀಡಲಿದ್ದು, ಹೈಸ್ಕೂಲ್ ಟೀಚರ್ಸ್ ಹೆಚ್ಎಂ ಆಗುವ ಅವಕಾಶ ದೊರೆಯಲಿದೆ ಎಂದರು.

2169 ಕಾಲೇಜುಗಳಲ್ಲಿ 806 ಪ್ರಾಂಶುಪಾಲರ ಹುದ್ದೆ ಖಾಲಿ ಇತ್ತು, ಕಳೆದ ವರ್ಷ ಕೆಲ ಹುದ್ದೆ ತುಂಬಲಾಗಿತ್ತು, ಈಗ ಮತ್ತೆ ಕೆಇಎ ಮೂಲಕ ತುಂಬಲಾಗ್ತಿದೆ ಎಂದ ಅವರು, ಪರೀಕ್ಷಾ ಅಕ್ರಮ ತಡೆಯಲು ಕರ್ನಾಟಕ ಸೆಕ್ಯೂರ್ ಎಕ್ಸಾಮಿನೇಷನ್ ಸಿಸ್ಟಮ್ ಮೂಲಕ ಪರೀಕ್ಷೆ ನಡೆಯಲಿದೆ. ಅದಕ್ಕೆ ಇಲಾಖಾ ಮಟ್ಟದ ಮುಂಜಾಗ್ರತೆ ವಹಿಸಲಾಗ್ತಿದೆ, ಪರೀಕ್ಷೆ ವಿಚಾರದಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ, ಈ ಹಿಂದಿನ ಅಕ್ರಮಕ್ಕೆ ಸಂಬಂಧಿಸಿದಂತೆ ಇನ್ನೂ ಸಿಒಡಿ ವರದಿ ಬಂದಿಲ್ಲ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ