ಮಂಗಳೂರು ಗಡಿಯಲ್ಲಿ ಕಟ್ಟೆಚ್ಚರ

police security in mangalore border

20-12-2017

ಮಂಗಳೂರು: ಕರ್ನಾಟಕ ಗಡಿಭಾಗದ ತಲಪಾಡಿ ಬಳಿಯ ಕುಂಜತ್ತೂರಿಲ್ಲಿ ಕೋಮುಸಂಘರ್ಷ ಉಂಟಾಗಿದೆ. ತಲಪಾಡಿಯ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ವೇಳೆ ಕೇಸರಿ ಬಾವುಟ, ಬ್ಯಾನರ್ ಮತ್ತು ಬಂಟಿಂಗ್ಸ್ ಗಳಿಗೆ ಕಿಡಿಗೇಡಿಗಳು ನಿನ್ನೆ ರಾತ್ರಿ ಬೆಂಕಿ ಹಚ್ಚಿದ್ದರು. ಇದಕ್ಕೆ ಪ್ರತಿಯಾಗಿ ಇಂದು ಇನ್ನೊಂದು ಕೋಮಿನ ಹಸಿರು ಬಾವುಟಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಕುರಿತು ಎಚ್ಚರ ವಹಿಸಿದ ಪೊಲೀಸರು ಕೋಮುಸಂಘರ್ಷ ನಡೆಯಬಹುದೆಂಬ ಶಂಕೆಯಲ್ಲಿ ಪೊಲೀಸ್ ಪೋರ್ಸ್ ನ್ನು ಹಾಕಲಾಗಿತ್ತು. ಆದರೆ ಪೊಲೀಸರ ಎದುರಲ್ಲಿ ಹಸಿರು ಬಾವುಟಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು, ಇನ್ನು ಎರಡು ಕೋಮಿನವರು ಪರಸ್ಪರ ಗಲಾಟೆಗೆ ಸಿದ್ದರಾಗುತ್ತಿದ್ದಾರೆ ಎಂದು ಅನುಮಾನಗೊಂಡ ಪೊಲೀಸರು, ಸ್ಥಳದಲ್ಲಿ ಮೊಕ್ಕಾಂ ಹೂಡಿ ಎಚ್ಚರ ವಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

communial riots police force ಕೋಮುಸಂಘರ್ಷ ಗಡಿಭಾಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ