ನರಗುಂದ ಪಟ್ಟಣದಲ್ಲಿ ಕರಾಳ ದಿನಾಚರಣೆ

Dark day in Naragunda town

20-12-2017

ಗದಗ: ಮಹದಾಯಿ ಹೋರಾಟಗಾರರು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಕರಾಳ ದಿನ ಆಚರಣೆ ಮಾಡಿದ್ದಾರೆ. ಮಹದಾಯಿ, ಕಳಸಾ ಬಂಡೂರಿ ವಿವಾದ ಇತ್ಯರ್ಥಕ್ಕೆ ಆಗ್ರಹಿಸಿ ಕರಾಳ ದಿನ ಆಚರಣೆ ನಡೆಸಿದ್ದಾರೆ. ಡಿಸೆಂಬರ್ 15ರೊಳಗೆ ವಿವಾದ ಇತ್ಯರ್ಥಪಡಿಸುವ ಭರವಸೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೀಡಿದ್ದರು, ಆದರೆ ಭರವಸೆ ಈಡೇರಿಸದ ಹಿನ್ನೆಲೆ ಕರಾಳ ದಿನ ಆಚರಣೆ ಮಾಡುತ್ತಿರುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ. ಕೈಗೆ ಕಪ್ಪು ಬಟ್ಟೆ ಕಟ್ಟಿ, ಕಪ್ಪು ಧ್ವಜ ಹಾಗೂ ಛತ್ರಿ ಹಿಡಿದು ಮಹದಾಯಿ ಹೋರಾಟಗಾರು ನರಗುಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಪ್ರತಿಭಟಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ