ಕಂಪನಿಯಲ್ಲಿ ಕನ್ನಡಿಗರಿಗೆ ಅನ್ಯಾಯ

Injustice to kannadigas in chitradurga

20-12-2017

ಚಿತ್ರದುರ್ಗ: ತಮಿಳುನಾಡು ಮೂಲದ ಫ್ಯಾನ್ ಕಂಪನಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿರುವ ಘಟನೆಯು ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ಎಂಎಸ್ಪಿಎಲ್ ಎಂಬ ತಮಿಳುನಾಡು ಮೂಲದ ಫ್ಯಾನ್ ಕಂಪನಿಯು, ಸುಮಾರು 14 ವರ್ಷಗಳಿಂದ ದುಡಿಯುತ್ತಿರುವ 25 ಜನ ಸ್ಥಳಿಯರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದೆ. ಅಲ್ಲದೇ ಅವರಿಗೆ ಮೂರು ತಿಂಗಳಿಂದ ಕೆಲಸ ಮಾಡಿದ್ದರೂ ಸಂಬಳ ನೀಡದೆ ವಂಚಿಸಿರೋ ಆರೋಪವೂ ಕೇಳಿಬಂದಿದೆ. ಹೊಟ್ಟೆ ಪಾಡಿಗಾಗಿ ಕಂಪನಿಯ ಕೆಲಸವನ್ನೇ ನಂಬಿಕೊಂಡಿರುವ ಕಾರ್ಮಿಕರ ಸ್ಥಿತಿ ಅತಂತ್ರವಾಗಿದೆ. ಒಂದು ಹೊತ್ತಿನ ಉಟಕ್ಕೂ ಕಾರ್ಮಿಕರು ಪರದಾಡುತ್ತಿದ್ದು, ಕಾರ್ಮಿಕ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ನೊಂದ ಕಾರ್ಮಿಕರು. ಅಷ್ಟಲ್ಲದೇ ನ್ಯಾಯ ಕೇಳಲು ಹೋದರೆ ಕನ್ನಡಿಗರ ಮೇಲೆ ದೌರ್ಜನ್ಯ ಎಸಗಿ, ಪೋಲಿಸ್ ಇಲಾಖೆಗೆ ದೂರು ನೀಡಿ ಬೆದರಿಕೆ ಹಾಕುತ್ತಿದ್ದು, ವಿಂಡ್ ಮಿಲ್ ಕಂಪನಿಗೆ ಪೊಲೀಸರೇ ರಕ್ಷಕರಾಗಿದ್ದಾರೆ, ನಮ್ಮ ಗೋಳು ಕೇಳೊರಿಲ್ಲ ಎಂದು ಕೆಲಸದಿಂದ ತೆಗೆಯಲ್ಪಟ್ಟ ಕಾರ್ಮಿಕರು ದೂರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

company kannada ತಮಿಳುನಾಡು ದೌರ್ಜನ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ