ಭತ್ತದ ಗದ್ದೆಗೆ ನುಗ್ಗಿದ ಬಸ್

KSRTC Bus accident

20-12-2017

ಬಳ್ಳಾರಿ: ಚಾಲಕನ ನಿಯಂತ್ರಣ ತಪ್ಪಿ ಭತ್ತದ ಗದ್ದೆಗೆ ಕೆಎಸ್ಆರ್ಟಿಸಿ ಬಸ್ ನುಗ್ಗಿರುವ ಘಟನೆಯು ಬಳ್ಳಾರಿಯಲ್ಲಿ ನಡೆದಿದೆ. ಕಂಪ್ಲಿಯಿಂದ ಬಳ್ಳಾರಿ ಪ್ರಯಾಣಿಕರನ್ನು ತುಂಬಿಕೊಂಡು ಸಂಚರಿಸುತ್ತಿದ್ದ ಬಸ್ ಬಳ್ಳಾರಿ ಮತ್ತು ಕಂಪ್ಲಿ ನಡುವಿನ ಹೊಸದರೋಜಿ ಬಳಿ ಈ ದುರ್ಘಟನೆ ನಡೆದಿದೆ. ಇನ್ನು ಘಟನೆಯಲ್ಲಿ, ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಅವರನ್ನು ಆಂಬ್ಯುಲೆನ್ಸ್ ನಲ್ಲಿ ಕುಡತಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಕುಡುತಿನಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಬಸ್ಸನ್ನು ರಸ್ತೆಗೆ ತರುವುದಕ್ಕೆ ನೆರವಾಗಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Bellary KSRTC ನಿಯಂತ್ರಣ ಪ್ರಯಾಣಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ