ವಾಯುಮಾಲಿನ್ಯ ನಿವಾರಣೆಗೆ ಗನ್ ಬಳಕೆ!

Delhi government tests anti-smog guns to combat haze

20-12-2017

ಮಹಾನಗರದಲ್ಲಿನ ಮಿತಿ ಮೀರಿದ ವಾಯುಮಾಲಿನ್ಯದಿಂದ ಕಂಗೆಟ್ಟಿರುವ ದೆಹಲಿ ಸರ್ಕಾರ, ಇದೀಗ Anti-smog gun ಅಂದರೆ  ಹೊಂಜು ನಿವಾರಕ ಗನ್  ಪ್ರಯೋಗ ನಡೆಸಿದೆ. (ಹೊಂಜು-ಹೊಗೆ ಮತ್ತು ಮಂಜಿನ ಸಂಯೋಗ).

ರಾಷ್ಟ್ರ ರಾಜಧಾನಿಯಲ್ಲಿನ ಪೂರ್ವ ದೆಹಲಿಯ ಆನಂದ್ ವಿಹಾರ್ ಪ್ರದೇಶದಲ್ಲಿ ಗಾಳಿಯ ಗುಣಮಟ್ಟದ ಸೂಚ್ಯಂಕ 413ರಷ್ಟನ್ನು ತಲುಪಿತ್ತು. ಈ ಹಿನ್ನೆಲೆಯಲ್ಲಿ ಹೊಂಜು ನಿವಾರಕ ಗನ್ ಬಳಸಲಾಯಿತು. Anti-smog gun ಅನ್ನುವುದು ಒಂದು ಯಂತ್ರ. ಇದನ್ನು ಒಂದು ವಾಹನದ ಮೇಲಿರಿಸಲಾಗಿರುತ್ತದೆ ಮತ್ತು ಅದರ ಜೊತೆಗೆ ಒಂದು ನೀರಿನ ಟ್ಯಾಂಕರ್ ಕೂಡ ಇರುತ್ತದೆ. ಫಿರಂಗಿಯಂತಿರುವ ಈ ಗನ್ ಬಳಸಿ ಸುಮಾರು 50 ಮೀಟರ್ ದೂರ ಅಥವ ಎತ್ತರದವರೆಗೆ ಮಳೆ ಬೀಳುವ ರೀತಿಯಲ್ಲಿ ವೇಗವಾಗಿ ನೀರಿನ ಹನಿಗಳನ್ನು ಸಿಂಪಡಿಸಬಹುದು. ಇದರಿಂದ, ವಾಯು ಮಾಲಿನ್ಯದ ತೀವ್ರತೆ ಒಂದಿಷ್ಟು ತಗ್ಗುತ್ತದೆ ಎನ್ನಲಾಗಿದೆ.

ಸೊನ್ನೆಯಿಂದ ಐನೂರರವರೆಗಿನ ಸಂಖ್ಯೆ ಇರುವ ಸ್ಕೇಲ್‌ ನಲ್ಲಿ 301ಕ್ಕಿಂತ ಹೆಚ್ಚಿನ ಸೂಚ್ಯಂಕ ತೋರಿಸುವ ವಾಯುಮಾಲಿನ್ಯ ತುಂಬಾ ಹೆಚ್ಚು ಎಂದು ಪರಿಗಣಿಸಲಾಗುತ್ತದೆ. ದೆಹಲಿಯಲ್ಲಿ ಬೀಸುತ್ತಿರುವ ಗಾಳಿಯ ವೇಗ ತೀರಾ ಕಡಿಮೆ ಇರುವುದು ಮತ್ತು ಹ್ಯುಮಿಡಿಟಿ ಅಂದರೆ ತೇವಾಂಶ ಹೆಚ್ಚಾಗಿರುವುದು, ನಗರದ ವಾಯುಮಾಲಿನ್ಯ ತೀವ್ರ ಸ್ವರೂಪ ಪಡೆದುಕೊಳ್ಳಲು ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ.


ಸಂಬಂಧಿತ ಟ್ಯಾಗ್ಗಳು

Delhi Anti-smog guns ವಾಯುಮಾಲಿನ್ಯ ಮಹಾನಗರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ