‘ಬಿಎಸ್ ವೈಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ’20-12-2017

ಬೆಂಗಳೂರು: ಬೇಸಿಗೆ ಹಾಗೂ ಶಾಲಾ ಪರೀಕ್ಷೆಗಳ ಸಮಯಕ್ಕೆ ಯಾರು ಆತಂಕಪಡುವ ಅಗತ್ಯ ಇಲ್ಲ ಎಂದು, ಇಂಧನ ಸಚಿವ ಡಿ.ಕೆ‌ ಶಿವಕುಮಾರ್ ಅಭಯ ನೀಡಿದ್ದಾರೆ. ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ಮಕ್ಕಳಿಗೆ ಪರೀಕ್ಷೆಗಳು ನಡೆಯಲಿದ್ದು ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದಿದ್ದಾರೆ. ಅಲ್ಲದೇ ಈ ಕುರಿತು ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು. ಶರಾವತಿಯಲ್ಲಿ ನೀರು ಶೇಖರಣೆ ಇದೆ, ಕಲ್ಲಿದ್ದಲಿಗೆ ಕೇಂದ್ರ ಮೇಲೆ ಒತ್ತಡ ಹೇರುತ್ತೇವೆ, ಜೊತೆಗೆ 1 ಮಿಲಿಯನ್ ಟನ್ ಕಲ್ಲಿದ್ದಲು ಖರೀದಿಗೆ ಟೆಂಡರ್ ಕರೆಯಲಾಗಿದೆ ಮತ್ತು 4.8 ಪೈಸೆಗೆ 1 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಕೂಡ ಖರೀದಿ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರ 2.5ರೂ.ಗೆ ವಿದ್ಯುತ್ ಕೊಡುತ್ತಾರೆ ಅಂತಾ ಯಡಿಯೂರಪ್ಪ ಹೇಳಿದ್ದರು, ಅದರಂತೆ ನಾನು ಕೇಂದ್ರಕ್ಕೆ, ಬಿಎಸ್ ವೈಗೆ ಪತ್ರ ಬರೆದೆ ಆದರೆ, ಏನು ಪ್ರಯೋಜನವಾಗಿಲ್ಲ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ