ರಾಜನಾಥ್ ಸಿಂಗ್ ಗೆ ರೆಡ್ಡಿ ಟಾಂಗ್

Reddy Tang to Rajnath Singh

20-12-2017

ಬೆಂಗಳೂರು: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿಕೆಗೆ, ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಧಾನ ಸೌಧದಲ್ಲಿಂದಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಗೌರಿ ಹಂತಕರನ್ನು ಬಂಧಿಸುತ್ತೇವೆ ಅನ್ನೋ ಹೇಳಿಕೆ ಹಾಸ್ಯಾಸ್ಪದ ಎಂದಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಕುಸಿದಿದೆ ಅನ್ನೋ ಆರೋಪವನ್ನು ಮಾಡಿದ್ರು, ಅವರ ಪಕ್ಷದವರು ಕೊಟ್ಟ ಮಾಹಿತಿ ಮೇಲೆ ರಾಜನಾಥ್ ಸಿಂಗ್ ಅವರು, ನಮ್ಮ ಮೇಲೆ ಈ ರೀತಿ ಆರೋಪ ಮಾಡಿರಬಹುದು, ಕೇಂದ್ರ ಗೃಹ ಸಚಿವರು ನಮ್ಮ ಮೇಲೆ ಬೆರಳು ತೋರಿಸೋ ಮೊದಲು ನಿಮ್ಮದೇ ಆಡಳಿತ ವೈಖರಿ ಬಗ್ಗೆ ನೋಡಿಕೊಳ್ಳಿ ಎಂದು ಟಾಂಗ್ ನೀಡಿದ್ದಾರೆ.

ನಿಮ್ಮ ಕಾರ್ಯವ್ಯಾಪ್ತಿಗೆ ಬರೋ ಸಿಬಿಐನಲ್ಲೇ ಪನ್ಸಾರೆ, ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆ ಅಗುತ್ತಿದೆ, ಅದರಲ್ಲೇಕೆ ಇನ್ನೂ ಅರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ, ಗೌರಿ ಸಾವಿನ ವೇಳೆ ಅತ್ತ ತಲೆ ಹಾಕೋ ಕೆಲಸವನ್ನು ಬಿಜೆಪಿಯವರು ಮಾಡಿಲ್ಲ, ಈಗ ನಮ್ಮ ಸರ್ಕಾರ ಬಂದರೆ ಅರೋಪಿಗಳನ್ನು ಬಂಧಿಸುತ್ತೇವೆ ಅನ್ನೋದು ಸರಿಯಾ ಇದು ನಿಮ್ಮ ಜಾಣಕುರುಡಾ? ಎಂದು ರಾಜನಾಥ್ ಸಿಂಗ್ ರನ್ನು ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.

ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ, ಕೇಂದ್ರ ಮಾಹಿತಿ ಪ್ರಕಾರ ನಮ್ಮ ರಾಜ್ಯ ಅಪರಾಧ ಪ್ರಕರಣಗಳ ಪಟ್ಟಿಯಲ್ಲಿ ಒಂಭತ್ತನೇ ಸ್ಥಾನದಲ್ಲಿದೆ, ಯುಪಿ,ಎಂಪಿಗಳು ಮೊದಲೆರಡು ಸ್ಥಾನಗಳಲ್ಲಿವೆ, ಅಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ, ಹೀಗಿರುವಾಗ ನಮ್ಮ ಬಗ್ಗೆ ಅವರು ಮಾಡಿರೋ ಆರೋಪ ಎಷ್ಟರಮಟ್ಟಿಗೆ ಸರಿ ಎಂದಿದ್ದು, ರಾಜನಾಥ್ ಸಿಂಗ್ ತವರು ಉತ್ತರ ಪ್ರದೇಶದಲ್ಲೇ ಅಪರಾಧ ಪ್ರಮಾಣದ ಸಂಖ್ಯೆ ದೇಶದಲ್ಲೇ ಮೊದಲಿದೆ, ಇದನ್ನು ಕೇಂದ್ರ ಗೃಹ ಸಚಿವರು ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ.

ಲೋಕಾಯುಕ್ತವನ್ನು ಬದಲಾಯಿಸಿ ಎಸಿಬಿ ಮಾಡಿ ಅದನ್ನು ಸತ್ವಹೀನವನ್ನಾಗಿಸಲಾಗಿದೆ ಎಂದು ರಾಜನಾಥ್ ಸಿಂಗ್ ಆರೋಪಿಸಿದ್ದರು, ಆದರೆ ನಾವು ಅಂತಂಹ ಯಾವುದೇ ಕೆಲಸವನ್ನ ಲೋಕಾಯುಕ್ತದ ವಿಚಾರದಲ್ಲಿ ಮಾಡಿಲ್ಲ. ಲೋಕಾಯುಕ್ತ ಸತ್ವ ಕಳೆದುಕೊಂಡಿದ್ದಿದ್ದರೆ ಅದು ಬಿಜೆಪಿ ಅವಧಿಯಲ್ಲಿ ಮಾತ್ರ. ಮೋದಿಯವರ ಆಡಳಿತ ಕಾಲದಲ್ಲಿ ಅವರ ರಾಜ್ಯದಲ್ಲಿ ಹತ್ತು ವರ್ಷಗಳ ಕಾಲ ಲೋಕಾಯುಕ್ತವೇ ಇರಲಿಲ್ಲ, ಹೀಗಿರುವಾಗ ಬಿಜೆಪಿಯವರು ನಮ್ಮ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ, ಜವಾಬ್ದಾರಿ ಸ್ಥಾನದಲ್ಲಿರೋ ಕೇಂದ್ರ ಗೃಹ ಸಚಿವರು ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ ಎಂದರು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ