24x7 ಶಾಪಿಂಗ್, ಊಟ, ಮಜಾ..!

24x7 Shops in Maharashtra..?

20-12-2017 565

ಇನ್ನು ಮೇಲೆ ನೀವು ಮಾಲ್‌ಗಳಲ್ಲಿ, ನಿಮ್ಮ ನೆಚ್ಚಿನ ಅಂಗಡಿಗಳಲ್ಲಿ ದಿನದ 24 ಗಂಟೆಯೂ ಶಾಪಿಂಗ್ ಮಾಡಬಹುದು, ಹೋಟೆಲ್  ಮತ್ತು ರೆಸ್ಟೋರೆಂಟ್‌ಗಳಲ್ಲಿ ಕುಳಿತು ಬೇಕಾದ್ದನ್ನು ತಿನ್ನಬಹುದು, ಹರಟೆ ಹೊಡೆಯಬಹುದು. ಯಾವ ಪೊಲೀಸ್ ಅಧಿಕಾರಿಯೂ ಬಂದು ನಿಮ್ಮನ್ನಾಗಲಿ, ಅಂಗಡಿ, ಮಾಲ್ ಅಥವ ಹೋಟೆಲ್ ಮಾಲೀಕನನ್ನಾಗಲಿ ಪ್ರಶ್ನಿಸುವಂತಿಲ್ಲ, ಬಾಗಿಲು ಮುಚ್ಚಿಸುವಂತಿಲ್ಲ ಅಥವ ಮೊನ್ನೆ ಮೊನ್ನೆ ಬೆಂಗಳೂರಿನ ಹೋಟೆಲೊಂದರಲ್ಲಿ ಮಾಡಿದಂತೆ ಲಾಠಿ ಪ್ರಯೋಗ ಮಾಡುವಂತಿಲ್ಲ.

ತುಂಬಾ ಖುಷಿ ಆಯ್ತು ಅಲ್ವಾ? ಆದರೆ, ಈ ಹೊಸ ನಿಯಮ ಜಾರಿಗೆ ಬಂದಿರೋದು ಕರ್ನಾಟದಲ್ಲಿ ಅಲ್ಲ, ನಮ್ಮ ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ.  ಅಲ್ಲಿನ ಸರ್ಕಾರ, ಮಹಾರಾಷ್ಟ್ರ ಶಾಪ್ಸ್ ಅಂಡ್ ಎಸ್ಟಾಬ್ಲಿಷ್‌ಮೆಂಟ್ಸ್ ಕಾಯ್ದೆಗೆ ತಿದ್ದುಪಡಿ ತಂದಿದೆ. ಇದರ ಅನ್ವಯ, ಹೋಟೆಲುಗಳು, ರೆಸ್ಟೋರೆಂಟ್‌ಗಳು, ಅಂಗಡಿಗಳು  ಮತ್ತು ಮಾಲ್‌ಗಳು ದಿನದ 24 ಗಂಟೆಯೂ ತೆರೆದಿರಲು ಅವಕಾಶ ನೀಡಲಾಗಿದೆ. ಆದರೆ, ಬಾರ್‌ಗಳು, ಪಬ್‌ ಗಳು, ಮದ್ಯದ ಅಂಗಡಿಗಳು ಮತ್ತು ಡಿಸ್ಕೋಥೆಕ್‌ಗಳಿಗೆ ಈ ವಿನಾಯಿತಿ ಅನ್ವಯವಾಗುವುದಿಲ್ಲ. ಈ ಹಿಂದೆ, ಮುಂಬೈ ಮತ್ತು ಮಹಾರಾಷ್ಟ್ರ ರಾಜ್ಯಾದ್ಯಂತ ಮಾಲ್ ಮತ್ತು ಅಂಗಡಿಗಳನ್ನು ರಾತ್ರಿ 10ಕ್ಕೆ ಮತ್ತು ರೆಸ್ಟೋರೆಂಟ್‌ಗಳನ್ನು ರಾತ್ರಿ 12.30ರ ಒಳಗೆ ಮುಚ್ಚಬೇಕಾಗಿತ್ತು.

ಮಹಾರಾಷ್ಟ್ರ ಸರ್ಕಾರದ ಈ ಹೊಸ ನಿಯಮದಿಂದ ಅಂಗಡಿಗಳು ಮತ್ತು ಮಾಲ್‌ಗಳಲ್ಲಿ ಮೂರು ಶಿಫ್ಟ್‌ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ಇದು ಹೆಚ್ಚಿನ ಉದ್ಯೋಗ ಸೃಷ್ಟಿಗೆ ಮತ್ತು ಆರ್ಥಿಕತೆಯ ವೃದ್ಧಿಗೂ ಅವಕಾಶ ನೀಡುತ್ತದೆ. ಆದರೆ, ಈ ಎಲ್ಲ ಕಡೆಗಳಲ್ಲೂ ಕೂಡ, ನೌಕರರಿಗೆ ವಾರಕ್ಕೆ ಒಂದು ದಿನ ರಜೆ ಅಥವ ವಿರಾಮ ಕೊಡುವುದನ್ನು ಕಡ್ಡಾಯಗೊಳಿಸಲಾಗಿದೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ