ಪರಿವರ್ತನಾ ಯಾತ್ರೆ ಬ್ಯಾನರ್ ಗೆ ವಿರೋಧ

objection to parivarthana yatra banner in hangal

20-12-2017 378

ಹಾವೇರಿ: ಬಿಜೆಪಿಯ ಪರಿವರ್ತನಾ ಯಾತ್ರೆಗೆ ಹಾಕಿದ್ದ ಬ್ಯಾನರ್ ಗಳ ವಿರುದ್ಧ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿರುವ ಘಟನೆಯು ಹಾವೇರಿಯಲ್ಲಿ ನಡೆದಿದೆ. ಹಾವೇರಿಯ ಹಾನಗಲ್ಲ ಗ್ರಾಮದಲ್ಲಿ ಅಳವಡಿಸಿದ್ದ ಬ್ಯಾನರ್ ಗಳಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾನಗಲ್ಲ ನಗರದ ಸಾರ್ವಜನಿಕ ಶಿಕ್ಷಣ ಸಂಸ್ಥೆಯಾದ ‘ಜನತಾ ಸಹಕಾರಿ ಶಿಕ್ಷಣ ಸಂಸ್ಥೆ’ ಪರಿವರ್ತನಾ ಯಾತ್ರೆಗೆ ಸ್ವಾಗತಕೋರಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಕುರಿತು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶಾಲಾ ಮಕ್ಕಳ ಪೋಷಕರು ಹಾಗು ಸಾರ್ವಜನಿಕರು, ಸಂಸ್ಥೆಯ ಕ್ರಮಕ್ಕೆ ಅಸಮಾಧಾನ ತೋರಿದ್ದಾರೆ. ‘ಜನತಾ ಸೌಹಾರ್ದ ಸಹಕಾರಿ ಶಿಕ್ಷಣ ಸಂಸ್ಥೆ' ಯಾವ ಪಕ್ಷಕ್ಕೂ ಸೀಮಿತವಲ್ಲ ಎಲ್ಲಾ ಧರ್ಮದ, ಎಲ್ಲಾ ಪಕ್ಷದ ಮುಖಂಡರು ದುಡಿದು ಕಟ್ಟಿರುವ ಸಂಸ್ಥೆ, ಆಡಳಿತ ಮಂಡಳಿಯ ಈ ಕ್ರಮದಿಂದ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ಬ್ಯಾನರ್ ಗಳನ್ನು ತೆರವು ಗೊಳಿಸುವಂತೆ ಒತ್ತಾಯಿಸಿದ್ದಾರೆ.ಸಂಬಂಧಿತ ಟ್ಯಾಗ್ಗಳು

parivarthana yatra Haveri-Hangal ಸೌಹಾರ್ದ ಬ್ಯಾನರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ