ವಿಪ್ ಉಲ್ಲಂಘನೆ: 7 ಕಾಂಗ್ರೆಸಿಗರು ಅನರ್ಹ

Whip violation: 7 Congressmen are ineligible

20-12-2017

ಯಾದಗಿರಿ: ಪಕ್ಷದ ವಿಪ್ ಉಲ್ಲಂಘಿಸಿದ ಏಳು ಮಂದಿ ಕಾಂಗ್ರೆಸ್ ಸದಸ್ಯರನ್ನು ಅನರ್ಹಗೊಳಿಸಿ, ಯಾದಗಿರಿ ಜಿಲ್ಲಾಧಿಕಾರಿ ಮಂಜುನಾಥ್. ಜೆ ಅವರು ಆದೇಶ ಹೊರಡಿಸಿದ್ದಾರೆ.

ಮಹ್ಮದ್ ಕಲೀಂ(16ನೇ ವಾರ್ಡ್), ಶರಣಮ್ಮ (23ನೆ ವಾರ್ಡ್), ಶಿವಕುಮಾರ್ (25ನೇ ವಾರ್ಡ್), ಶಶಿಧರರೆಡ್ಡಿ (30ನೆ ವಾರ್ಡ್), ಬಸವರಾಜ ಜೈನ್ (31ನೇ ವಾರ್ಡ್), ಅಕ್ಕಮಹಾದೇವಿ (3ನೇ ವಾರ್ಡ್), ಮಹಮ್ಮದ್ ಇಬ್ರಾಹಿಂ (13ನೇ ವಾರ್ಡ್) ಅನರ್ಹಗೊಂಡ ಸದಸ್ಯರು.

ಕಳೆದ ಮೇ 3 ರಂದು ನಡೆದ ನಗರಸಭೆ ಅಧ್ಯಕ್ಷ  ಚುನಾವಣೆಯಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸಿ ವಿಪ್ ಉಲ್ಲಂಘನೆ ಮಾಡಿದ ಆರೋಪ ಹಿನ್ನೆಲೆ. ಈ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ.  ಒಟ್ಟು 31 ನಗರಸಭೆ ಸದಸ್ಯರ ಪೈಕಿ, ಕಾಂಗ್ರೆಸ್ 11, ಬಿಜೆಪಿ 7, ಜೆಡಿಎಸ್ 8, ಬಿಎಸ್ ಆರ್ ಕಾಂಗ್ರೆಸ್ 4, ಪಕ್ಷೇತರ 1 ಸದಸ್ಯರಿದ್ದಾರೆ. 4 ನಜ ಸದಸ್ಯರಿದ್ದ ಬಿಎಸ್ ಆರ್ ಕಾಂಗ್ರೆಸ್ ಸದಸ್ಯೆ ಲಲಿತಾ ಅನಪೂರ 24 ಸದಸ್ಯರ ಬೆಂಬಲ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಕಾಂಗ್ರೆಸ್ ನ ಸದಸ್ಯ ಶಂಕರ ರಾಠೋಡ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿ 4 ಮತಗಳು ಪಡೆದು ಸೋಲು ಕಂಡಿದ್ದರು.  ಕಾಂಗ್ರೆಸ್ ನ 11 ಜನ ಸದಸ್ಯರ ಪೈಕಿ 7 ಜನರು ಪಕ್ಷದ ವಿರುದ್ಧ ಮತ ಚಲಾಯಿಸಿದ್ದು, ವಿಪ್ ಉಲ್ಲಂಘನೆ ಮಾಡಿದ ಆರೋಪ ಹಿನ್ನೆಲೆ, ಕಾಂಗ್ರೆಸ್ ನ ನಗರಸಭೆ ಸದಸ್ಯ ಶಂಕರ್ ರಾಠೋಡ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಪಕ್ಷದ ನಿಯಮಗಳು ಉಲ್ಲಂಘಿಸಿರುವುದು ಖಚಿತವಾದ ಹಿನ್ನೆಲೆ ಅನರ್ಹಗೊಳಿಸಿ ಆದೇಶಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

District Collector Municipality ನಗರಸಭೆ ಚುನಾವಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ