ಬಿಎಂಟಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ

free wi-fi in BMTC

19-12-2017

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‍ಗಳಿಗೆ ಇದೀಗ ಹೈಟೆಕ್ ಸ್ಪರ್ಶ ನೀಡಲಾಗುತ್ತಿದ್ದು, ಇನ್ನು ಮುಂದೆ ಪ್ರಯಾಣಿಕರಿಗೆ ಉಚಿತ ವೈಫೈ ಸೇವೆ ನೀಡಲು ನಿರ್ಧರಿಸಿದೆ. ಇದುವರೆಗೆ ಬಿಎಂಟಿಸಿ ವೋಲ್ವೋ ಬಸ್‍ಗಳಲ್ಲಿ ನೀಡಲಾಗುತ್ತಿದ್ದ ಉಚಿತ ವೈಫೈ ಸೇವೆಯನ್ನು ಎಸಿ ರಹಿತ ಸಾಮಾನ್ಯ ಬಸ್‍ಗಳಲ್ಲೂ ನೀಡಲು ಸರ್ಕಾರ ನಿರ್ಧರಿಸಿದ್ದು, ಬಿಎಂಟಿಸಿಗಳಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಪಡೆಯುತ್ತಿದ್ದ ಉಚಿತ ವೈಫೈ ಸೇವೆ ಬಸ್ಸಿನಲ್ಲಿ ಪ್ರಯಾಣಿಸುವಾಗಲೂ ಸಿಗಲಿದೆ.

ಪ್ರತಿಯೊಬ್ಬ ಪ್ರಯಾಣಿಕನಿಗೂ 30 ಎಂಬಿ ಉಚಿತ ವೈಫೈ ನೀಡಲು ನಿರ್ಧರಿಸಲಾಗಿದೆ. ಬಸ್ ನಲ್ಲಿಯೇ ಲಾಗಿನ್ ಐಡಿ, ಪಾಸ್ ವರ್ಡ್ ನೀಡಲಾಗುತ್ತದೆ. 7.2 ಎಂಪಿಬಿಎಸ್ ವೇಗದ ಇಂಟರ್ನೆಟ್ ಸೇವೆ ನೀಡಲು ಟೆಂಡರ್ ಕರೆಯಲಾಗಿದೆ. ಆದರೆ ಉಚಿತ ವೈಫೈ ಸೇವೆ ನೀಡಲು ಬಿಎಂಟಿಸಿ ಯಾವುದೇ ರೀತಿಯ ಹಣ ವ್ಯಯಿಸುತ್ತಿಲ್ಲ. ಬದಲಾಗಿದೆ ಟೆಂಡರ್ ಪಡೆಯುವ ಏಜೆನ್ಸಿಗೆ ಬಸ್ ನಲ್ಲಿ ಉಚಿತವಾಗಿ ಜಾಹೀರಾತು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗುತ್ತದೆ. ಹೀಗಾಗಿ ಫ್ರೀ ವೈಫೈ ಸೇವೆ ನೀಡುವ ಬಿಎಂಟಿಸಿಗೆ ಮತ್ತೆ ಹೆಚ್ಚುವರಿಯಾಗಿ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲ.

ಈ ಕುರಿತು ಮಾಹಿತಿ ನೀಡಿದ ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್,ಇಂದು ಬಹುತೇಕ ಪ್ರಯಾಣಿಕರು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದಾರೆ. ಇಂಟರ್ ನೆಟ್ ಸೇವೆ ನೀಡಿದರೆ ಅವರಿಗೆ ಉಪಯೋಗವಾಗಲಿದೆ. ಸಾಮಾನ್ಯ ಬಸ್ಗಳಲ್ಲಿಯೂ ಹೆಚ್ಚು ಹೆಚ್ಚು ಪ್ರಯಾಣಿಕರು ಸಂಚರಿಸಲಿದ್ದಾರೆ. ಜೊತೆಗೆ ನಾವು ಫ್ರೀ ವೈಫೈ ಸೇವೆ ನೀಡಿದರೆ ಕೆಲ ಪ್ರಯಾಣಿಕರಿಗೆ ಅವರ ಕಚೇರಿಗೆ ಸಂಬಂಧಿಸಿದ ಕೆಲಸಕ್ಕೆ ಸಹಕಾರಿಯಾಗಬಹುದು ಹಾಗಾಗಿ ನಾವು ಫ್ರೀ ವೈಫೈ ಸೇವೆ ನೀಡಲು ನಿರ್ಧರಿಸಿದ್ದೇವೆ ಎಂದರು.


ಸಂಬಂಧಿತ ಟ್ಯಾಗ್ಗಳು

BMTC Wi-Fi ವೋಲ್ವೋ ಬಸ್‍ ಸಾರಿಗೆ ಸಂಸ್ಥೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ