ಜಿಮ್ಸ್ ಆಸ್ಪತ್ರೆಯ ಮತ್ತೊಂದು ಯಡವಟ್ಟು

No injection in Jims hospital..?

19-12-2017

ಗದಗ: ಗದಗ ಜಿಮ್ಸ್( ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ) ಆಸ್ಪತ್ರೆ ಆಡಳಿತದಿಂದ ಮತ್ತೊಂದು ಯಡವಟ್ಟು ಬೆಳಕಿಗೆ ಬಂದಿದೆ. ಎರಡು ದಿನಗಳಿಂದ ಆ್ಯಂಟಿ ಬಯೋಟಿಕ್ ಇಂಜೆಕ್ಷನ್‌ ಇಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ. ಇದರಿಂದ ಬಾಣಂತಿಯರು ಸೇರಿ ಹಲವು ರೋಗಿಗಳ ತೊಂದರೆಗೊಳಗಾಗಿದ್ದಾರೆ. ಜಿಮ್ಸ್ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಸರ್ಜನ್ ನಡುವಿನ ಗುದ್ದಾಟಕ್ಕೆ ರೋಗಿಗಳ ನರಳಾಡುವಂತಾಗಿದೆ. ಜಿಮ್ಸ್ ಆಡಳಿತಾಧಿಕಾರಿ ಎ.ಬಿ. ಪಾಟೀಲ್, ಸರ್ಜನ್ ಜಿ.ಎಂ.ಪಲ್ಲೇದ್ ಮುಸುಕಿನ ಗುದ್ದಾಟ ಹಿನ್ನೆಲೆ ರೋಗಿಗಳು ಚುಚ್ಚುಮದ್ದುಗಳಿಲ್ಲದೆ ಪರದಾಡುತ್ತಿದ್ದಾರೆ. ಔಷಧೀಯ ಬೇಡಿಕೆ ಪತ್ರಕ್ಕೆ ಸಹಿ ಹಾಕುವ ವಿಷಯದಲ್ಲಿ ಅಧಿಕಾರಿಗಳು ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಕಳೆದ ಎರಡು ದಿನಗಳಿಂದ ರೋಗಿಗಳಿಗೆ ಇಂಜೆಕ್ಷನ್‌ ನೀಡದ ಆರೋಪ ಕೇಳಿಬಂದಿದ್ದು, ಜಿಮ್ಸ್ ಆಡಳಿತದ ವಿರುದ್ಧ ರೋಗಿಗಳ ‌ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

gadag JIMS ಯಡವಟ್ಟು ಬಾಣಂತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ