8 ಮಂದಿ ಕುಖ್ಯಾತ ಡಕಾಯಿತರ ಬಂಧನ

8 notorious bandits arrested

19-12-2017

ಬೆಂಗಳೂರು: ಹೆದ್ದಾರಿಗಳಲ್ಲಿ ವಾಹನ ಚಾಲಕರನ್ನು ಅಡ್ಡಗಟ್ಟಿ ಡ್ರಾಗರ್ ತೋರಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದ 8 ಮಂದಿ ಕುಖ್ಯಾತ ಡಕಾಯಿತರನ್ನು ಬಂಧಿಸಿರುವ ದಕ್ಷಿಣ ವಲಯ ಪೊಲೀಸರು 21 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಪರಮೇಶ್ ಅಲಿಯಾಸ್ ಅಶ್ವತ್ಥ (24), ದರ್ಶನ್ ಅಲಿಯಾಸ್ ದರ್ಶು (24), ಶ್ರೀನಿವಾಸ್ ಅಲಿಯಾಸ್ ಸೀನ (23), ವಾಸು (25), ಮಂಜುನಾಥ ಅಲಿಯಾಸ್ ಜಂಗ್ಲಿ (19), ನಂಜುಂಡ ಅಲಿಯಾಸ್ ಗೋಟು (24), ಶಿವಕುಮಾರ್ ಅಲಿಯಾಸ್ ಪ್ರವೀಣ (25), ರವಿ (24) ಬಂಧಿತ ಡಕಾಯಿತರು. ಬಂಧಿತರಿಂದ 21 ಲಕ್ಷ ಮೌಲ್ಯದ 190 ಗ್ರಾಂ ಚಿನ್ನ, 256 ಗ್ರಾಂ ಬೆಳ್ಳಿ, 2 ಮೊಬೈಲ್, ಇನ್ನೋವಾ ಕಾರು ಸೇರಿ 21 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಎಸ್.ಡಿ ಶರಣಪ್ಪ ತಿಳಿಸಿದ್ದಾರೆ.

ಆರೋಪಿಗಳು ಕಳೆದ 2 ದಿನಗಳಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇನ್ನೋವಾ ಕಾರಿನಲ್ಲಿ ಸಂಚರಿಸುತ್ತ ವಾಹನ ಚಾಲಕರನ್ನು ಅಡ್ಡಗಟ್ಟಿ, ಡ್ರ್ಯಾಗರ್ ತೋರಿಸಿ, ಬೆದರಿಸಿ ಸುಲಿಗೆ ಮಾಡುತ್ತಿದ್ದರು. ಇದಲ್ಲದೆ ಮಂಗಳಮುಖಿಯರು ನಡೆಸುತ್ತಿದ್ದ ಹಮಾಮ್‍ಗಳಿಗೆ ನುಗ್ಗಿ ಡಕಾಯಿತಿ ನಡೆಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಆರೋಪಿಗಳ ಬಂಧನದಿಂದ ಮಾದನಾಯಕನಹಳ್ಳಿಯ ದೇವಣ್ಣ ಪಾಳ್ಯದಲ್ಲಿ ನಡೆದಿದ್ದ ಢಕಾಯಿತಿ, ಕಳ್ಳಂಬೆಳ್ಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ದರೋಡೆ, ಶಿರಾದ ವರಾಳು ಬಳಿ ನಡೆದ ಡಕಾಯಿತಿ ಸೇರಿ ಮೂರು ಢಕಾಯಿತಿ ಪ್ರಕರಣಗಳು ಪತ್ತೆಯಾಗಿವೆ. ಇದಲ್ಲದೆ ಆರೋಪಿಗಳಾದ ಪರಮೇಶ್, ದರ್ಶನ್, ವಾಸು ಹಾಗೂ ಮಂಜುನಾಥನ ಮೇಲೆ ಚೆನ್ನರಾಯನಪಟ್ಟಣ, ವಿದ್ಯಾರಣ್ಯಪುರ, ಪೀಣ್ಯ ಹಾಗೂ ರಾಜಗೋಪಾಲ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಕೆಂಪೇಗೌಡ ನಗರ ಪೊಲೀಸ್ ಇನ್ಸ್ ಪೆಕ್ಟರ್ ವಿಶ್ವಾಸ್ ಮತ್ತವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Arrest Robbery Gang ದರೋಡೆ ಡ್ರ್ಯಾಗರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ