ದೇವಸ್ಥಾನದ ಚಿನ್ನ-ಬೆಳ್ಳಿ ದೋಚಿ ಪರಾರಿ

Robbery in temple

19-12-2017

ಬೆಂಗಳೂರು: ರಾಘವೇಂದ್ರಸ್ವಾಮಿ ದೇವಾಲಯಕ್ಕೆ ನುಗ್ಗಿರುವ ದುಷ್ಕರ್ಮಿಗಳು ಚಿನ್ನ, ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಜಯನಗರದ 4ನೇ ಟಿ ಬ್ಲಾಕ್‍ನಲ್ಲಿ ನಡೆದಿದೆ. ರಾಘವೇಂದ್ರಸ್ವಾಮಿ ದೇವಾಲಯಕ್ಕೆ ನುಗ್ಗಿರುವ ದುಷ್ಕರ್ಮಿಗಳು, ದೇವಾಲಯದಲ್ಲಿದ್ದ ಚಿನ್ನ, ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದು, ಸದ್ಯಕ್ಕೆ ಅವುಗಳ ಮೌಲ್ಯ ತಿಳಿದು ಬಂದಿಲ್ಲ. ಸುದ್ದಿತಿಳಿದ ತಕ್ಷಣ ಜಯನಗರ ಪೊಲೀಸರು ದೇವಾಲಯಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ದೇವಾಲಯದ ಆಡಳಿತ ಮಂಡಳಿಯ ಗೋಪಿನಾಥ್ ಎಂಬುವರು ನೀಡಿರುವ ದೂರು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇನ್ನೊಂದೆಡೆ ರಾಜಗೋಪಾಲ ನಗರದ ಮಾರತಿ ನಗರದ ಫಾರೂಕ್ ಎಂಬುವರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು, 2 ವಾಚ್, 1 ಜೊತೆ ಕಾಲು ಚೈನ್ ದೋಚಿ ಪರಾರಿಯಾಗಿದ್ದಾರೆ. ಕಳೆದ ಡಿ. 16 ರಂದು ಫಾರೂಕ್ ಅವರು ಕುಟುಂಬ ಸಮೇತ ಹೊರಗೆ ಹೋಗಿ ನಿನ್ನೆ ಸಂಜೆ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಪತ್ತೆಯಾಗಿದೆ. ಪ್ರಕರಣ ದಾಖಲಿಸಿರುವ ರಾಜಗೋಪಾಲನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Raghavendra swamy Temple ಜಯನಗರ ಆಭರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ