ಮತ್ತೆ ನಾಲಿಗೆ ಹರಿಬಿಟ್ಟ ಲಕ್ಷಣ್ ಸವದಿ

Laxman Savadi loose talk in koppal

19-12-2017

ಕೊಪ್ಪಳ: ಕೊಪ್ಪಳದಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾಜಿ ಸಚಿವ ಲಕ್ಷ್ಮಣ್ ಸವದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ವೇಳೆ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಕುಕನೂರಲ್ಲಿ ನಡೆಯುತ್ತಿರುವ ಬಿಜೆಪಿ ಯಾತ್ರೆಯಲ್ಲಿ, ಸಚಿವ ಬಸವರಾಜ ರಾಯರಡ್ಡಿ ಶವಯಾತ್ರೆ ಮಾಡುತ್ತೇವೆ ಎಂದು, ಲಕ್ಷ್ಮಣ್ ಸವದಿ ಹೇಳಿದ್ದಾರೆ. ನಾನು, ಮುರುಗೇಶ್ ನಿರಾಣಿ, ಶ್ರೀರಾಮುಲು,ಕೆ.ವಿರುಪಾಕ್ಷಪ್ಪ ನಾಲ್ಕು ಜನ ಸೇರಿ ರಾಯರಡ್ಡಿಯನ್ನು ಹೊರುತ್ತೇವೆ, ಶವಯಾತ್ರೆ ಮುಂದೆ ಗಡಿಗೆ ತಗೊಂಡು ಗೋವಿಂದ ಕಾರಜೋಳ ಹೋಗ್ತಾರೆ ಎಂದು, ರಾಯರಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ