‘ರಾಯರೆಡ್ಡಿ ಮೊದಲ ಭ್ರಷ್ಟ’-ಬಿಎಸ್ ವೈ19-12-2017

ಕೊಪ್ಪಳ: ಕಪ್ಪಳದಲ್ಲಿ ನಡಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ,  ಕಾಂಗ್ರೆಸ್ ನ ಬಸವರಾಜ್ ರಾಯರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.  ಬಸವರಾಜ್ ರಾಯರೆಡ್ಡಿ ಲ್ಯಾಪ್ ಟಾಪ್  ಯೋಜನೆಯಲ್ಲಿ 300 ಕೋಟಿ ಹೊಡೆಯಲು ಸಂಚು ಮಾಡಿದ್ರು, ಮಾರ್ಕ್ಸ್ ಕಾರ್ಡ್ ಹಗರಣದಲ್ಲಿ ರಾಯರೆಡ್ಡಿ ಭಾಗಿಯಾಗಿದ್ದಾರೆ, ಸಿದ್ದರಾಮಯ್ಯ ಕಂಪನಿಯಲ್ಲಿ ರಾಯರೆಡ್ಡಿ ಮೊದಲ ಭ್ರಷ್ಟ ಎಂದು, ನೇರವಾಗಿ ಆರೋಪಿಸಿದ್ದಾರೆ. ಯಲಬುರ್ಗಾ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಆಗಬೇಕು ಅಂದರೆ ರಾಯರೆಡ್ಡಿ ಸೋಲಬೇಕು ಎಂದರು.  ನಾನು ಮೋದಿ ಕಾಲು ಹಿಡಿದು ಹಣ ತಂದು ಕೃಷ್ಣಾ 'ಬಿ ಸ್ಕೀಮ್' ಯೋಜನೆ ಸಂಪೂರ್ಣ ಮಾಡುತ್ತೇನೆಂದು ಪ್ರಮಾಣ ಮಾಡಿರುವುದಾಗಿ, ಸಿದ್ದರಾಮಯ್ಯ ಅಪಪ್ರಚಾರದಲ್ಲಿ ತೊಡಗಿದ್ದಾರೆ, ಇದು ನಿಮಗೆ ಶೋಭೆ ತರುವುದಿಲ್ಲ ಎಂದಿದ್ದಾರೆ. ಇದೇ ವೇಳೆ ಯಲಬುರ್ಗಾ ಕ್ಷೇತ್ರಕ್ಕೆ ಹಾಲಪ್ಪ ಆಚಾರ್ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಯಡಿಯೂರಪ್ಪ, ಮುಂದಿನ ಚುನಾವಣೆಯಲ್ಲಿ ಹಾಲಪ್ಪ ಆಚಾರ್ ಗೆಲ್ಲಿಸುವಂತೆ ಜನತೆಯಲ್ಲಿ ಮನವಿ ಮಾಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ