ತಾಯಿಯನ್ನೇ ಕೊಂದ ಮಗ

son murdered his mother

19-12-2017

ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪತಿಮ್ಮನಹಳ್ಳಿಯಲ್ಲಿ, ಮಗನೇ ತನ್ನ ತಾಯಿ ಮೇಲೆ ಲಾರಿ ಹರಿಸಿ ಹತ್ಯೆ ಮಾಡಿರುವ ದಾರುಣ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಯಲಹಂಕದ ಜಯಶ್ರೀ ಎಂದು ಗುರುತಿಸಲಾಗಿದೆ. ಜಯಶ್ರೀ ಅವರ ಕಿರಿಯ ಪುತ್ರ ಅರುಣ್ ಎಂಬಾತ ಲಾರಿ ಹರಿಸಿ ಹತ್ಯೆ ಮಾಡಿರುವ ಆರೋಪಿಯಾಗಿದ್ದಾನೆ.

ಜಯಶ್ರಿ ತಮ್ಮ ಗಂಡನ ಆಸ್ತಿಯಲ್ಲಿನ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಮಾಡಬೇಕೆಂದು ಸ್ನೇಹಿತೆಯೊಂದಿಗೆ ಕೆಂಪತಿಮ್ಮನಹಳ್ಳಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಜಮೀನಿಲ್ಲಿ ಭೂಮಿ ಪೂಜೆ ಆರಂಭಿಸಿದಾಗ ಸ್ಥಳದಲ್ಲಿದ್ದ ಜಯಶ್ರೀಯ ಕಿರಿಯ ಪುತ್ರ ಅರುಣ್ ಜಮೀನಿನಲ್ಲಿ ಪೂಜೆ ಮಾಡಲು ಅಡ್ಡಿಪಡಿಸಿದ್ದಾನೆ. ಆದರೂ ಸಹ ಜಯಶ್ರೀ ಪೂಜೆ ಮುಂದುವರೆಸಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಅರುಣ್ ಪೂಜೆಯಲ್ಲಿ ನಿರತಳಾಗಿದ್ದ ತಾಯಿಯ ಮೇಲೆ ಲಾರಿ ಹರಿಸಿ ಸ್ಥಳದಿಂದ ಕುಟುಂಬ ಸಮೇತ ಪರಾರಿಯಾಗಿದ್ದಾನೆ, ಜಯಶ್ರೀ ಕಳೆದ 20 ವರ್ಷಗಳಿಂದ ಗಂಡ ಮತ್ತು ಮಕ್ಕಳನ್ನ ಬಿಟ್ಟು, ಯಲಹಂಕದಲ್ಲೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಇತ್ತೀಚೆಗೆ ಜಯಶ್ರೀ ಮೈಮೇಲೆ ದೇವರು ಬರುತ್ತಿತ್ತು ಎನ್ನಲಾಗಿದೆ.

ಹೀಗಾಗಿ ಗ್ರಾಮದಲ್ಲಿ ಒಂದು ದೇವಸ್ಥಾನ ಕಟ್ಟಬೇಕೆಂದು ಸ್ನೇಹಿತೆ ಜೊತೆ ಬಂದು ಜಾಗದಲ್ಲಿ ಪೂಜೆ ಆರಂಭಿಸಿದ್ದರು. ಈ ವೇಳೆ ತಾಯಿ ಮಗನ ನಡುವಿನ ಜಗಳ ಎರಡು ಮಾತುಗಳಲ್ಲಿ ಅಂತ್ಯವಾಗುತ್ತದೆ ಅಂದುಕೊಂಡಿದ್ದ ಗ್ರಾಮಸ್ಥರು, ನೋಡನೋಡುತ್ತಲೇ ದುರ್ಘಟನೆ ನಡೆದಿದೆ. ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

murder Bangalore Rural ದುರ್ಘಟನೆ ದೇವಸ್ಥಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ