ಸಿಎಂ ವಿರುದ್ಧ ಹೆಚ್ಡಿಕೆ ಗಂಭೀರ ಆರೋಪ

HD kumaraswamy v/s siddaramaiah

19-12-2017

ಬೆಂಗಳೂರು: ಜೆಡಿಎಸ್ ನ ಜಿ.ಟಿ.ದೇವೇಗೌಡರ ವಿರುದ್ಧ ಎಸಿಬಿ ದಾಳಿ ಚಿಂತನೆ ವಿಚಾರಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ಜೆಪಿ ಭವನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕಾರ ಬಳಸಿ ತಮ್ಮ ಎದುರಿನ ಅಭ್ಯರ್ಥಿ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿಯಾಗಿದ್ದು, ಸಿಎಂ ಕೂಡ ಇದೇ ಕ್ಷೇತ್ರದಿಂದ ಕಣಕ್ಕಿಳಿಯಲು ಚಿಂತನೆ ನಡೆಸಿದ್ದಾರೆ, ಹೀಗಿರುವಾಗ ಅಭ್ಯರ್ಥಿಯನ್ನು ಎದುರಿಸಲು ಸಾಧ್ಯವಾಗದೆ ಎಸಿಬಿ ಮೂಲಕ ಹಣಿಯಲು ಹೊರಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನ ಇಲವಾಲಾ ಬಳಿ ಗೂಂಗ್ರಳ್ಳಿ ಭೂ ವಿಚಾರಕ್ಕೆ ಸಂಬಂಧಿಸಿದಂತೆ ಸಿಸಿಬಿ ತನಿಖೆಗೆ ನೀಡಲು ಹೊರಟಿದ್ದಾರೆ, ವಸತಿ ನಿವೇಶನಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಸಂದರ್ಭದಲ್ಲಿ ಗೃಹ ಮಂಡಳಿ ಅಧ್ಯಕ್ಷರಾಗಿ ಜಿ.ಟಿ.ದೇವೇಗೌಡರಿದ್ದರು, ಈ ಕುರಿತು ಅವರ ವಿರುದ್ಧ ಅಕ್ರಮ ಭೂ ವ್ಯವಹಾರವೆಂದು, ಹಳೆಯ ವಿಚಾರವನ್ನು ಕೆದಕಲು ಸಿಎಂ ಮುಂದಾಗಿದ್ದಾರೆ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದರು.

ಎದುರಾಳಿ ಎದುರಿಸುವ ಶಕ್ತಿಯಿಲ್ಲದೆ ಈ ಕುತಂತ್ರಕ್ಕೆ ಮುಂದಾಗಿದ್ದಾರೆ, ಕಾಂಗ್ರೆಸ್ ಗೆ ಬರುವಂತೆ ಜಿಟಿಡಿಗೆ ಒತ್ತಾಯ ಮಾಡುತ್ತಿದ್ದು,ಇಲ್ಲವಾದರೆ ನಿಮ್ಮ ಮೇಲೆ ತನಿಖೆ ನಡೆಸಿ ಜೈಲಿಗೆ ಕಳಿಸುತ್ತೇವೆ ಎಂದು ಜಿಟಿಡಿಗೆ ಸಿಎಂ ಸಿದ್ದರಾಮಯ್ಯ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 44 ಆರೋಪಿಗಳ ಪಟ್ಟಿ ಮಾಡಿ ನಿನ್ನೆ ಎಫ್ಐಆರ್ ಹಾಕಿದ್ದೀರಾ, ಮೂರು ವರ್ಷಗಳ ನಂತರ 44 ಮಂದಿ ವಿರುದ್ಧ ಎಫ್ಐಆರ್ ಹಾಕಿದ್ದೀರಾ, ಇದು ಎಷ್ಟರ ಮಟ್ಟಿಗೆ ಸರಿ, ಎಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

HD kumaraswamy siddaramaiah ಜಿ.ಟಿ.ದೇವೇಗೌಡ ಎಫ್ಐಆರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ