‘ಚುನಾವಣಾ ಆಯೋಗ ದುರ್ಬಳಕೆಯಾಗಿದೆ’19-12-2017

ಬಳ್ಳಾರಿ: ದೇಶದಲ್ಲಿ ಹೊಸ ಶಕೆ ರಾಹುಲ್ ರಿಂದ ಪ್ರಾರಂಭವಾಗಿದೆ ಎಂದು, ಕಾಂಗ್ರೆಸ್ ನ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಆಯೋಗ ದುರ್ಬಳಕೆಯಾಗಿದೆ ಎಂದು ಆರೋಪ ಮಾಡಿದ್ದಾರೆ. ಗುಜರಾತ್ ನ ಜನ ಕಳೆದ 22 ವರ್ಷದ ಅಭಿವೃದ್ಧಿ ಮಾಡೆಲ್ ತಿರಸ್ಕಾರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ಸಂವಿಧಾನ, ನೆಲದ ಕಾನೂನು ಎತ್ತಿಹಿಡಿತಿನಿ ಅಂದಿದ್ದರು, ಗುಜರಾತ್ ಚುನಾವಣಾ ಪ್ರಚಾರಕ್ಕೆ 58ಕ್ಕೂ ಹೆಚ್ಚು ಬಾರಿ ಮೋದಿ  ಹೋಗಿದ್ದಾರೆ, ಜನರ ಬಳಿ ಕಣ್ಣಿರು ಹಾಕಿದ್ದಾರೆ, ಸೋಮನಾಥ್ ದೇವಾಲಯ ಹೆಸರು ಬಳಕೆ ಮಾಡಿಕೊಂಡಿದ್ದಾರೆ, ನೆಹರೂ ಹೆಸರು ವಿನಾ ಕಾರಣ ಹೇಳಿದ್ದಾರೆ, ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಆಕ್ರೋಶದಿಂದ ನುಡಿದಿದ್ದಾರೆ.

ಅಲ್ಲದೇ ರಾಹುಲ್ ಗಾಂಧಿಗೆ ನೋಟಿಸ್ ಕೊಡ್ತಾರೆ, ಕಾಂಗ್ರೆಸ್ ಪಕ್ಷವನ್ನು ಪಾಕಿಸ್ತಾನದ ಪರವಾಗಿದ್ದಾರೆ ಎಂದು ರಾಜಕೀಯ ಲಾಭಕ್ಕಾಗಿ ಈ ರೀತಿ ಮಾತನಾಡುತ್ತಾರೆ ಎಂದು ಆರೋಪಿಸಿದರು. ಕಳೆದ ಬಾರಿಗಿಂತ ಬಿಜೆಪಿಗೆ 16ಸ್ಥಾನ ಕಡಿಮೆಯಾಗಿದೆ, ನರೇಂದ್ರ ಮೋದಿ ಮತ್ತು ಷಾ ಗೆ ಸೋಲಿನ ರುಚಿ ತೋರಿಸುವ ನಿಟ್ಟಿನಲ್ಲಿ ಗೆಲ್ಲಿಸಿದ್ದಾರೆ, ಅವರ ಸೋಲಿನ ಹಾದಿ ಆರಂಭ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎಂದರು.

ಕಪ್ಪು ಹಣ ತರ್ತಿವಿ ಅಂದರು ಆಗಿಲ್ಲ, ಬೆಲೆಯೇರಿಕೆ ಹೆಚ್ಚಾಗಿದೆ, ಉದ್ಯೋಗ ಸೃಷ್ಟಿ ಆಗಿಲ್ಲ ನೋಟು ಅಪಮೌಲ್ಯೀಕರಣ ವಿಚಾರವಾಗಿ ಕಾರಣ ಕೊಟ್ಟ ಯಾವ ವಿಷಯದಲ್ಲೂ ಜಾರಿಯಾಗಿಲ್ಲ, ಒಂದೇ, ಒಂದು ಬೇಡಿಕೆ ಈಡೇರಿಸಿಲ್ಲ, ಲೋಕಪಾಲ್ ಮಸೂದೆ ಜಾರಿಗೆ ತರಲಿಲ್ಲ, ರಾಷ್ಟ್ರದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ಕೆಂಡಾಮಂಡಲರಾದರು. ಬಿಜೆಪಿಯವರ ಪಾಪ್ಯುಲಾರಿಟಿ ಕಡಿಮೆಯಾಗುತ್ತಿದೆ, ಈ ರಾಷ್ಟ್ರದಲ್ಲಿ ಜಾತ್ಯಾತೀತತೆ, ಧರ್ಮ ನಿರಪೇಕ್ಷತೆಯನ್ನು ಬೆಂಬಲಿಸುತ್ತಾರೆ, ಬಿಜೆಪಿಯವರು ಹಿಂದೂ ಹೆಸರು ಹೇಳಿ ನಾಟಕ ಮಾಡುತ್ತಾರೆ ಎಂದು ಆರೋಪಿಸಿದರು. ಅಮಿತ್ ಷಾ ಬಂದು ಕಾರ್ಯಕರ್ತರನ್ನು ಗಲಾಟೆಗೆ ಹುರಿದುಂಬಿಸುತ್ತಾರೆ‌, ಬಿಜೆಪಿ ಎಂಪಿಗಳು ನಾಲಿಗೆಗಳನ್ನು ಹರಿಬಿಡುತ್ತಾರೆ, ಪ್ರಚೋದನೆ ಮಾಡಿ ಗಲಾಟೆ ಮಾಡಿಸುತ್ತಾರೆ, ಬಿಜೆಪಿಗೆ ನೆಲದ ಕಾನೂನಿನ ಮೇಲೆ ಗೌರವ ಇಲ್ಲ, ಬಿಜೆಪಿಗೆ ಪ್ರಗತಿಯ ಬಗ್ಗೆ ತಾತ್ವಿಕ ಬದ್ಧತೆ ಇಲ್ಲ ಎಂದು ಕಿಡಿಕಾರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

V.S Ugrappa Election Commission ಉದ್ಯೋಗ ನೋಟಿಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ