‘ಮಾರ್ಚ್ ನಲ್ಲಿ ಕೈ ಅಭ್ಯರ್ಥಿಗಳ ಪಟ್ಟಿ’19-12-2017

ಬಾಗಲಕೋಟೆ: ಗುಜರಾತ್ ನಲ್ಲಿ ನಾವು ಸೋತಿಲ್ಲ, ಅದು ನಮ್ಮ ಗೆಲುವು, ಮೋದಿ ಅಮಿತ್ ಷಾ ಎಲ್ಲರೂ ಇದ್ದರೂ ಕೂಡ ಗೆದ್ದೋರು ನಾವು, ಈ ಬಾರಿ ಗುಜರಾತ್ ನಲ್ಲಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆದ್ದಿದ್ದೇವೆ, ಇದು ಮೋದಿ ಸೋಲಿನ ಆರಂಭ ಎಂದು ಸಿಎಂ ಸಿದ್ದಾರಾಮಯ್ಯ ಹೇಳಿದ್ದಾರೆ, ಬಾಗಲಕೋಟೆಯ ಜಮಖಂಡಿಯಲ್ಲಿ ಮಾತನಾಡಿದ ಅವರು, ಗುಜರಾತ್ ಹಿಮಾಚಲ ಪ್ರದೇಶದ ಚುನಾವಣೆಯಿಂದ ನಾವು ಮಂಕಾಗಿಲ್ಲ, ಮತ್ತಷ್ಟು ಅಗ್ರೆಸ್ಸಿವ್ ಆಗಿದ್ದೇವೆ ಎಂದಿದ್ದಾರೆ.

ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ರಾಜ್ಯದಲ್ಲಿ ಯಾವುದೇ ಪರಿಣಾಮ ಬೀರೋದಿಲ್ಲ, ರಾಜ್ಯದಲ್ಲಿ ನಮ್ಮ ಪಕ್ಷ ಬಿಟ್ಟು ಯಾರು ಬೇರೆ ಪಕ್ಷಕ್ಕೆ ಹೋಗೋದಿಲ್ಲ, ನಮ್ಮ ಪಕ್ಷಕ್ಕೆ ಬೇರೆ ಪಕ್ಷದವರು ಬರುತ್ತಾರೆ, ಕೆಲವರು ಸಂಪರ್ಕದಲ್ಲಿದ್ದಾರೆ ಎಂದರು. ಇನ್ನು ಮಾರ್ಚ್ ತಿಂಗಳಲ್ಲಿ ವಿಧಾನಸಭೆ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು, ಪಕ್ಷನಿಷ್ಠೆ, ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದೆಂದರು. ಅಲ್ಲದೇ ಫೆಬ್ರವರಿ ತಿಂಗಳಲ್ಲಿ ಬಜೆಟ್ ಮಂಡನೆ ಮಾಡಲಿದ್ದೇವೆ ಎಂದು ತಿಳಿಸಿದರು. ಮಹಾದಾಯಿ ನಾಲಾ ಜೋಡಣೆ ವಿವಾದದ ಕುರಿತು, ಚುನಾವಣೆಗೋಸ್ಕರ ಈಗ ಭರವಸೆ ನೀಡುತ್ತಿದ್ದಾರೆ, ಇದಕ್ಕಾಗಿ ಈ ನಾನು ಹಿಂದೆ ಎರಡು ಬಾರಿ ಪತ್ರ ಬರೆದಿದ್ದೆ, ಆವಾಗ ಯಾವುದೇ ಉತ್ತರ ಬಂದಿಲ್ಲ, ಮಹಾದಾಯಿ ವಿವಾದ ಬಗೆಹರಿಸಲಿ ನಮಗೆ ಸಂತೋಷವಿದೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Siddaramaiah Mahadayi ಅಮಿತ್ ಷಾ ಫೆಬ್ರವರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ