ನಕಲಿ ಅಂಕಪಟ್ಟಿ, ಸರ್ಟಿಪಿಕೇಟ್‍ಗಳನ್ನು ನೀಡಿ ವಂಚಿಸುತ್ತಿದ್ದ ಆರೋಪಿಯ ಬಂಧನ

Kannada News

13-04-2017

ಬೆಂಗಳೂರು,ಏ.13-ಪದವಿಗಳಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡಂತೆ ನಕಲಿ ಅಂಕಪಟ್ಟಿಗಳನ್ನು ಹಾಗೂ ಪ್ರಾವಿಷನಲ್ ಸರ್ಟಿಪಿಕೇಟ್‍ಗಳನ್ನು ನೀಡಿ ವಂಚನೆ ನಡೆಸುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ನಕಲಿ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಹೆಬ್ಬಾಳದ ಮಾನ್ಯತ ಗೇಟ್‍ನ ಫಿನಾಕಿಲ್ ಅಪಾರ್ಟ್‍ಮೆಂಟ್ ವಾಸಿ ಕುನಾಲ್ ಕುಮಾರ್ ಮಂಡಲ್(28)ಬಂಧಿತ ಆರೋಪಿಯಾಗಿದ್ದಾನೆ,ಬಂಧಿತನಿಂದ ನಕಲಿ ಅಂಕಪಟ್ಟಿಗಳು, ಕೃತ್ಯವೆಸಗಲು ಉಪಯೋಗಿಸಿದ ಕಂಪ್ಯೂಟರ್ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ರವಿ ತಿಳಿಸಿದ್ದಾರೆ.
ಎಂ.ಜಿ.ರಸ್ತೆಯ ರೇರ್ ಮಣಿಪಾಲ್ ಸೆಂಟರ್, ನಾರ್ಥ್ ಬ್ಲಾಕ್, ಯೂನಿಟ್ ನಂ.708 ರಲ್ಲಿರುವ ಜೂನಿಯರ್ ಫಾರ್ ಏಜುಕೇಶನ್ ಕಚೇರಿಯ ಮೇಲೆ ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ನಾಲ್ಕೈದು ಈ-ಮೇಲ್‍ಗಳಿಂದ ವಿಧ್ಯಾರ್ಥಿಗಳಿಗೆ ಪ್ರತಿಷ್ಟಿತ ಕಾಲೇಜಿನಲ್ಲಿ ಅಡ್ಮಿಷನ್‍ಗೆ ಸೀಟು ಕೊಡಿಸುವುದಾಗಿ  ನಂಬಿಸಿ ಅವರುಗಳನ್ನು ತಮ್ಮ ಕಛೇರಿಗೆ ಬರಮಾಡಿಕೊಂಡು ವಿಧ್ಯಾರ್ಥಿಗಳ ವಿವರಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಈ ಹಿಂದೆ ಬೇರೆ ವಿಶ್ವವಿದ್ಯಾಲಯದ ಪದವಿಗಳಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡಿರುವಂತೆ ನಕಲಿ ಅಂಕಪಟ್ಟಿಗಳನ್ನು ಹಾಗೂ ಪ್ರಾವಿಷನಲ್ ಸರ್ಟಿಪಿಕೇಟ್‍ಗಳನ್ನು ನೀಡಿ ಆಕ್ರಮ ಹಣಸಂಪಾದನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಶರ್ಟ್‍ಗಳ ವಶ
 ಡಿ ವಿ ಜಿ ರಸ್ತೆಯಲ್ಲಿರುವ ಭುವನ್ ಹೈ ಫ್ಯಾಷನ್ ಎಂಬ ಅಂಗಡಿಯಲ್ಲಿ ಲೀ,ಲೂಯಿ ಫಿಲಿಪಿ ಇನ್ನಿತರ ಬ್ರಾಂಡ್‍ಗಳ ನಕಲಿ ಶರ್ಟ್‍ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿ 3ಲಕ್ಷ 10 ಸಾವಿರ ಮೌಲ್ಯದ ನಕಲಿ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.
 ಮಾಗಡಿರಸ್ತೆಯ  2ನೇ ಕ್ರಾಸ್‍ನ  ಪ್ರಕಾಶ್(36) ಬಂಧಿತ ಆರೋಪಿಯಾಗಿದ್ದಾನೆಬಂಧಿತನಿಂದ ರೂ.3,10,000/- ಬೆಲೆ ಬಾಳುವ  ಷರ್ಟ್‍ಗಳನ್ನು ವಶಪಡಿಸಿಕೊಂಡು  ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ