ಪ್ರಜ್ವಲ್ ಪ್ರಭಾವ ಕಡಿಮೆ ಮಾಡಲು ಸಂಚು!

plot in jds to cotain prajwals growth

19-12-2017

ಜೆಡಿಎಸ್ ನಲ್ಲಿ ಈಗಾಗಲೇ ಸೋದರರಾದ ಹೆಚ್‌.ಡಿ.ಕುಮಾರ ಸ್ವಾಮಿ ಮತ್ತು ಹೆಚ್‌.ಡಿ.ರೇವಣ್ಣ ಎಷ್ಟೇ ಅನ್ಯೋನ್ಯವಾಗಿದ್ದಾರೆ ಎಂದರೂ ಕೂಡ ಕುಟುಂಬದ ಮಟ್ಟದಲ್ಲಿ ಒಂದಿಷ್ಟು ಒತ್ತಡಗಳು, ಸಮಸ್ಯೆಗಳು ಇದ್ದೇ ಇರುತ್ತವೆ. ಇದರ ಜೊತೆಗೆ, ಕುಮಾರ ಸ್ವಾಮಿ ಪುತ್ರ ನಿಖಿಲ್‌ಗೆ ರಾಜಕಾರಣದಲ್ಲಿ ಅಷ್ಟೇನೂ ಆಸಕ್ತಿ ಇದ್ದಂತೆ ಕಾಣುವುದಿಲ್ಲ. ಆದರೆ, ರೇವಣ್ಣ ಪುತ್ರ ಪ್ರಜ್ವಲ್ ಇದೀಗ ರಾಜಕೀಯ ರಂಗಕ್ಕೆ ಧುಮುಕಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಪ್ರಜ್ವಲ್ ಅವರೇ ಜೆಡಿಎಸ್ ಮತ್ತು ಕುಮಾರ ಸ್ವಾಮಿ ಅವರ ರಾಜಕೀಯ ಉತ್ತರಾಧಿಕಾರಿಯಾಗುವ ಎಲ್ಲ ಸಾಧ್ಯತೆಗಳೂ ಕಂಡುಬರುತ್ತಿವೆ. ಆದರೆ, ಪ್ರಜ್ವಲ್ ರಾಜಕೀಯ ಭವಿಷ್ಯವನ್ನು ಆರಂಭದಲ್ಲೇ ಮಸುಕುಗೊಳಿಸುವ ಬೆಳವಣಿಗೆಗಳು ಜೆಡಿಎಸ್‌ನಲ್ಲಿ ನಡೆಯುತ್ತಿವೆ. ಜನಪ್ರಿಯ ನಟರನ್ನು ಜೆಡಿಎಸ್ ಪಕ್ಷಕ್ಕೆ ಸೆಳೆಯಲು ಮುಂದಾಗಿರುವ ಹೆಚ್‌.ಡಿ.ಕುಮಾರ ಸ್ವಾಮಿ, ಈಗಾಗಲೇ ನಟ ಸುದೀಪ್‌ರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಚುನಾವಣೆ ಹತ್ತಿರವಾದಂತೆ, ಇನ್ನೂ ಹಲವರು ನಟ ನಟಿಯರು ಜೆಡಿಎಸ್‌ನತ್ತ ಹೆಜ್ಜೆ ಹಾಕಿದರೂ ಆಶ್ಚರ್ಯವೇನೂ ಇಲ್ಲ. ಇದೆಲ್ಲವನ್ನೂ ಗಮನಿಸಿದರೆ, ರೇವಣ್ಣ ಪುತ್ರ ಪ್ರಜ್ವಲ್ ಅವರ ರಾಜಕೀಯ ಪಾದಾರ್ಪಣೆ ಮತ್ತು ಬೆಳವಣಿಗೆಯ ಪ್ರಖರತೆಯನ್ನು ಆರಂಭದಲ್ಲೇ ಕುಗ್ಗಿಸುವ ತಂತ್ರಗಾರಿಕೆಗಳು, ಜೆಡಿಎಸ್‌ನೊಳಗೇ ಒಂದು ಕಡೆ ನಡೆಯುತ್ತಿವೆ ಅನ್ನುವುದು ಸ್ಪಷ್ಟವಾಗುತ್ತದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ