'ಇವಿಎಂ ಮೇಲೆ ಜನಸಾಮಾನ್ಯರಿಗೆ ಅನುಮಾನ’19-12-2017

ಕಲಬುರಗಿ: ಇವಿಎಮ್( ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್)ಗಳನ್ನು ಸಂಶೋಧನೆಗೆ ಒಳಪಡಿಸಲು ಅವಕಾಶ ಮಾಡಿಕೊಡಿ ಎಂದು, ಕೇಂದ್ರಕ್ಕೆ ಪತ್ರ ಬರೆಯಲು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮುಂದಾಗಿದ್ದಾರೆ. ಈ ಕುರಿತು ಕಲಬುರಗಿಯಲ್ಲಿಂದು ಮಾತನಾಡಿದ ಅವರು, ಇವಿಎಮ್ ಮೆಷಿನ್ ಗಳ ಮೇಲೆ ಜನರಿಗೆ ಅನುಮಾನ ಇದ್ದು, ಅದನ್ನು ಸರಿ ಪಡಿಸಲು ನಮಗೆ ಮೆಷಿನ್ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ‌ಪತ್ರ ಬರೆಯಲು ನಿರ್ಧರಿಸಿದ್ದಾರೆ. ಈಗಾಗಲೇ ಪತ್ರ ಸಿದ್ಧಗೊಂಡಿದ್ದು, ನಿನ್ನೆಯಷ್ಟೇ ಸಿಎಂ‌ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದೂ ಕೂಡ ತಿಳಿಸಿದ್ದಾರೆ. ನಾಳೆ ಬೆಂಗಳೂರಿಗೆ ಹೋದ ಕೂಡಲೇ ಪತ್ರ ಕೇಂದ್ರಕ್ಕೆ ರವಾನಿಸಲಾಗುವುದು ಎಂದು ಮಾಹಿತಿ ನೀಡಿದರು. ರಾಜಕೀಯ ಮುಖಂಡರ ಮುಂದೆ ಕೇಂದ್ರ ಸ್ಪಷ್ಟನೆ ನೀಡುತ್ತಿದೆ, ಆದರೆ ಬಹಳಷ್ಟು ರಾಜಕಾರಣಿಗಳಿಗೆ ತಂತ್ರಜ್ಞಾನದ ಮಾಹಿತಿ ಇಲ್ಲ, ಹೀಗಾಗಿ ತಂತ್ರಜ್ಞಾನ ನುರಿತ ಖಾಸಗಿ ಸಂಸ್ಥೆಗಳು ಸೇರಿದಂತೆ ಹಲವು ಕಾರ್ಪೋರೇಟರ್ ಕಂಪನಿಗಳ ಕೈಯಲ್ಲಿ ಎಲ್ಲರ ಸಮ್ಮುಖದಲ್ಲಿ ಮೆಷಿನ್ ನೀಡಿ ಸಂಶೋಧನೆ ನಡೆಸಿ, ಅದರಲ್ಲಿ ಯಾವ ವರದಿ ಬರುತ್ತೊ ಅದನ್ನ‌ ನಾವೂ ಒಪ್ಪಿಕೊಳ್ಳುತ್ತೇವೆ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Priyank Kharge voting machine ಇವಿಎಮ್ ಸಂಶೋಧನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ