‘ನನಗೆ ಹೃದಯಾಘಾತವಾಗಿಲ್ಲ’-ಬಿಎಸ್ ವೈ19-12-2017

ಕೊಪ್ಪಳ: ಬಿಜೆಪಿ ರಾಜ್ಯಧ್ಯಕ್ಷ ಯಡಿಯೂರಪ್ಪನವರಿಗೆ ಹೃದಯಾಘಾತವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ವೈರಲ್ ಬಗ್ಗೆ ಕೊಪ್ಪಳದಲ್ಲಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ನಂತರ ಮೊದಲ ಪರಿವರ್ತನೆ ಯಾತ್ರೆಗೆ ಕೊಪ್ಪಳಕ್ಕೆ ಆಗಮಿಸಿದ ಯಡಿಯೂರಪ್ಪನವರು, ನನಗೆ ಯಾವುದೇ ಹೃದಯಾಘಾತವಾಗಿಲ್ಲ, ನೀವು ನನ್ನನ್ನು ನೋಡ್ತೀದಿರಾ ತಾನೆ, ಪ್ರತ್ಯಕ್ಷವಾಗಿ ನೀವು ನನ್ನನ್ನು ನೋಡುತ್ತಿದ್ದೀರಾ ತಾನೆ ಎಂದು ಯಾತ್ರೆವೇಳೆ ಕೇಳಿದ್ದಾರೆ. ನನ್ನನ್ನು ನೋಡಿ ಬೇರೆಯವರಿಗೆ ಹೃದಯಾಘಾತವಾಗುತ್ತೆ, ನನಗೆ ಹೃದಯಾಘಾತವಾಗಿಲ್ಲ ಎಂದು ಹೇಳಿದ್ದಾರೆ. ಇನ್ನು ರಾಜ್ಯದಲ್ಲಾಗುತ್ತಿರುವ ಕೋಮುಗಲಭೆಗೆ ನೇರವಾಗಿ ರಾಜ್ಯ ಸರ್ಕಾರವೇ ಕಾರಣ, ಗುಜರಾತ್ ನಲ್ಲಿ ಬಿಜೆಪಿ ವರ್ಚಸ್ಸು ಕುಂದಿಲ್ಲ, 5 ಬಾರಿ ಆಡಳಿತ ನಡೆಸೋದು ಸಾಮಾನ್ಯ ಮಾತಲ್ಲ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

B.S.Yeddyurappa heart attack ಕೋಮುಗಲಭೆ ಆಡಳಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ