ಶ್ರೀರಾಮುಲು ನಿವಾಸದಲ್ಲಿ ಬೆಂಕಿ

Fire Breaks Out at BJP MP B Sriramulu

19-12-2017

ದೆಹಲಿ: ಸಂಸದ ಶ್ರೀರಾಮಲು ಅವರ ದೆಹಲಿ ನಿವಾಸಕ್ಕೆ ಆಕಸ್ಮಿಕ ಬೆಂಕಿ ತಗುಲಿ, ಬಹುತೇಕ ಬೆಂಕಿಗಾಹುತಿಯಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಶ್ರೀರಾಮುಲು ಅವರಿಗೆ ಯಾವುದೇ ಗಾಯಗಳಾಗದಿದ್ದು ಅಪಾಯದಿಂದ ಪಾರಾಗಿದ್ದಾರೆ. ನವದೆಹಲಿಯ ಫಿರೋಜ್ ಷಾ ರಸ್ತೆಯಲ್ಲಿರುವ ಶ್ರೀರಾಮುಲು ನಿವಾಸವನ್ನು ಇತ್ತೀಚೆಗಷ್ಟೇ ನವೀಕರಿಸಲಾಗಿತ್ತು. ಶ್ರೀರಾಮುಲು ಅವರು ಮಲಗಿದ್ದ ಕೊಠಡಿಯಲ್ಲೇ ಮೊದಲು ಬೆಂಕಿ ಹೊತ್ತಿಕೊಂಡಿದ್ದು, ನಂತರ ಎಲ್ಲ ಕಡೆ ಬೆಂಕಿ ಆವರಿಸಿದೆ. ಕರ್ಟನ್ ಮೂಲಕ ಸೋಫಾಗೆ ಹೊತ್ತಿಕೊಂಡ ಬೆಂಕಿ ಬೃಹತ್ ಸ್ವರೂಪ ಪಡೆದುಕೊಂಡಿತ್ತು. ಅಗ್ನಿ ಅವಘಡದಿಂದ ಶ್ರೀರಾಮುಲು ಬೆಡ್ ರೂಂ ಸುಟ್ಟು ಕರಕಲಾಗಿದೆ. ಸಂಸದರ ಕೊಠಡಿ ಹೊರತು ಪಡಿಸಿ ಉಳಿದ ಭಾಗಕ್ಕೆ ಅಲ್ಪ-ಸ್ವಲ್ಪ ಹಾನಿಯಾಗಿದೆ. ಬೆಂಕಿ ನಂದಿಸುವಲ್ಲಿ ಅಗ್ನಿ ಶಾಮಕ ದಳ ಸಿಬ್ಬಂದಿ  ಯಶಸ್ವಿಯಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ