ಅಕ್ರಮ ಸಾಗಾಟ: ಅನ್ನಭಾಗ್ಯ ಅಕ್ಕಿ ವಶ

3 anna Bhagya lorry seized

19-12-2017

ಚಿತ್ರದುರ್ಗ: ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ತಡರಾತ್ರಿಯಲ್ಲಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ ಲಾರಿಗಳನ್ನು ವಶಪಪಡಿಸಿಕೊಂಡಿರುವ ಘಟನೆಯು, ಚತ್ರದುರ್ಗದಲ್ಲಿ ನಡೆದಿದೆ. 60ಕ್ಕೂ ಹೆಚ್ಚು ಟನ್ ಅಕ್ಕಿ ತುಂಬಿದ್ದ ಮೂರು ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂರು ದಿನಗಳ ಹಿಂದೆ ಚಳ್ಳಕೆರೆ ಪೊಲೀಸರು ದಾಳಿ ನಡೆಸಿದ್ದು, ಪ್ರಕರಣ ದಾಖಲಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಮೀರಿ ತಡರಾತ್ರಿಯಲ್ಲಿ 60ಕ್ಕೂ ಅಧಿಕ ಟನ್ ಅಕ್ಕಿ ಸಾಗಿಸುತ್ತಿರುವುದು ಕಂಡುಬಂದಿದೆ. ಆಂಧ್ರ ಗಡಿ ಮೊಳಕಾಲ್ಮೂರು ಮಾರ್ಗವಾಗಿ ತರಳುತ್ತಿದ್ದ ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸರ್ಕಾರದ ಅಕ್ಕಿ ಪೊಲೀಸರ ವಶದಲ್ಲಿದ್ದು ಮೂರು ದಿನ ಕಳೆದರೂ ಮಾಹಿತಿ ತಿಳಿಯದ ಅಧಿಕಾರಿಗಳು. ಗುಡ್ಡದ ರಂಗವ್ವನಹಳ್ಳಿ ಎಫ್.ಸಿ.ಐ ಗೋಡಾನ್ ನಿಂದ ಅಕ್ರಮವಾಗಿ ಅಕ್ಕಿ ಸಾಗಟದ ಶಂಕೆ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

anna Bhagya violation of rules ಅನ್ನಭಾಗ್ಯ ಮೀನಾಮೇಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ