ಶಾಸಕ ಉಮೇಶ್ ಕತ್ತಿ ಬಂಧನಕ್ಕೆ ಆಗ್ರಹ

Dalit association demand to arrest umesh kathi

18-12-2017

ಬೆಳಗಾವಿ: ಬೆಳಗಾವಿ ಹುಕ್ಕೇರಿಯ ಬಿಜೆಪಿ ಶಾಸಕ ಉಮೇಶ್ ಕತ್ತಿ, ದಲಿತರ ಬಗ್ಗೆ ಅಸಂವಿಂಧಾನಿಕ ಪದ ಬಳಕೆ ವಿಚಾರವಾಗಿ, ಉಮೇಶ ಕತ್ತಿಯನ್ನು ಬಂಧಿಸುವಂತೆ ವಿವಿಧ ದಲಿತ ಸಂಘಟನೆಗಳಿಂದ ಚಿಕ್ಕೋಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಚಿಕ್ಕೋಡಿಯಲ್ಲಿ ದಲಿತ ಪರ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದ್ದು, ರ‍್ಯಾಲಿಯಲ್ಲಿ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿ, ಪ್ರತಿಭಟನಾ ವೇಳೆ ಉಮೇಶ ಕತ್ತಿ ಅಣುಕು ಶವ ಯಾತ್ರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಮೇಶ ಕತ್ತಿ ಬಂಧನಕ್ಕೆ ಅನುಮತಿ ನೀಡುವಂತೆ ಉಪವಿಭಾಗಧಿಕಾರಿಗಳ ಮೂಲಕ ವಿಧಾನಸಭೆ ಸ್ಪೀಕರ್ ಗೆ ಮನವಿ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

umesh kathi unconstitutional ಪ್ರತಿಭಟನೆ ಸ್ಪೀಕರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ