'ಪ್ರಧಾನಿ ಕಚೇರಿ ಪ್ರತಿಷ್ಠೆ-ಗೌರವ ಕುಸಿದಿದೆ’

Dave Gowda

18-12-2017

ದೆಹಲಿ: ಇಷ್ಟು ಕೀಳು ಅಭಿರುಚಿಯಿಂದ ಕೂಡಿದ ಚುನಾವಣೆ ಹಿಂದೆಂದೂ ನಡೆದಿರಲಿಲ್ಲ ಎಂದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಿಡಿಕಾರಿದ್ದಾರೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶದ ಕುರಿತು, ದೆಹಲಿಯಲ್ಲಿಂದು ಮಾತನಾಡಿದ ಅವರು, ಮೋದಿಯಿಂದ ಪ್ರಧಾನಿ ಕಚೇರಿಯ ಪ್ರತಿಷ್ಠೆ ಮತ್ತು ಗೌರವ ಕುಸಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಆಡಳಿತವಿರೋಧಿ ಅಲೆಯನ್ನು ಕಾಂಗ್ರೆಸ್ ಸದುಪಯೋಗಪಡಿಸಿಕೊಂಡಿಲ್ಲ, ರಾಹುಲ್ ಗಾಂಧಿ ಸ್ವಲ್ಪ ಮಾತ್ರ ಗಳಿಸಿಕೊಂಡಿದ್ದಾರೆ, ಇಷ್ಟು ದೀರ್ಘಕಾಲ ಅಧಿಕಾರದಲ್ಲಿದ್ದಾಗ ದೋಷ ಕಾಣುವುದು ಸಾಮಾನ್ಯ, ಮೋದಿ ವರ್ಚಸ್ಸಿನಿಂದ ಬಿಜೆಪಿ ಮತ್ತೆ ಗೆಲ್ಲಲು ಸಾಧ್ಯವಾಗಿದೆ ಎಂದರು. ಇನ್ನು ಗುಜರಾತ್ ಚುನಾವಣೆ ರಾಜ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ, ಗುಜರಾತಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಾತ್ರ ಇವೆ, ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಇವೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ