ಸಾಲದ ನೇಣು....!

A man hang suicide in bangalore

18-12-2017

ಬೆಂಗಳೂರು: ಸಾಲಗಾರರ ಕಾಟ ತಾಳಲಾರದೆ ಬಿಗ್ ಬಜಾರ್‍ ನ ಉದ್ಯೋಗಿಯೊಬ್ಬರು ನೇಣಿಗೆ ಶರಣಾಗಿರುವ ಧಾರುಣ ಘಟನೆಯು ನಗರದಲ್ಲಿ ನಡೆದಿದೆ. ಕೋಣನಕುಂಟೆಯ ಚುಂಚನಘಟ್ಟದಲ್ಲಿ ಈ ದುರ್ಘಟನೆ ಸಂಭವಿಸಿದೆ. ಆತ್ಮಹತ್ಯೆಗೆ ಶರಣಾದವರನ್ನು ಚುಂಚನಘಟ್ಟ ಮುಖ್ಯರಸ್ತೆಯ ಎಲ್ಲಮ್ಮ ದೇವಾಲಯದ ಬಳಿ ವಾಸಿಸುತ್ತಿದ್ದ ದಿವಾಕರ್ (30)ಎಂದು ಗುರುತಿಸಲಾಗಿದೆ.  ಕೌಟುಂಬಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಅವರಿವರ ಬಳಿ ಸಾಲ ಮಾಡಿಕೊಂಡಿದ್ದ ದಿವಾಕರ್‍ ಗೆ ಇತ್ತೀಚೆಗೆ ಸಾಲ ವಾಪಸ್ ಕೊಡುವಂತೆ ಒತ್ತಡ ತರಲಾಗುತ್ತಿತ್ತು. ಸಾಲ ಕೊಟ್ಟವರ ಒತ್ತಡದಿಂದ ತೀವ್ರವಾಗಿ ನೊಂದಿದ್ದ ದಿವಾಕರ್ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

suicide big bazaar ತನಿಖೆ ಉದ್ಯೋಗಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ