ಹೊತ್ತಿ ಉರಿದ ಪಿಠೋಪಕರಣಗಳ ಗೋದಾಮು

fire accident in godown

18-12-2017

ಬೆಂಗಳೂರು:  ಬಿಟಿಎಂ ಲೇಔಟ್‍ ನ ಎರಡನೇ ಹಂತದ ಬಳಿಯ ಪೀಠೋಪಕರಣಗಳ ಗೋದಾಮಿಗೆ ನಿನ್ನೆ ರಾತ್ರಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಪೀಠೋಪಕರಣಗಳು ಮರದ ಬಿಡಿಭಾಗಗಳು ಬೆಂಕಿಗಾಹುತಿಯಾಗಿವೆ. ಬಿಟಿಎಂ 2ನೇ ಹಂತದ 16ನೇ ಮುಖ್ಯರಸ್ತೆಯ ಓಂ ಸ್ಟೈಲ್ ಫರ್ನೀಚರ್ ಅಂಡ್ ಮ್ಯಾನುಫ್ಯಾಕ್ಚರ್ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಸ್ವಲ್ಪ ಹೊತ್ತಿನಲ್ಲಿಯೇ ಬೆಂಕಿಯು ಇಡೀ ಗೋದಾಮು ಆವರಿಸಿ ಅಪಾರ ಪ್ರಮಾಣದ ಪೀಠೋಪಕರಣಗಳು ಸುಟ್ಟುಹೋಗಿವೆ.

ಬೆಂಕಿಯಿಂದ ದಟ್ಟಹೊಗೆ ಹೊರಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಆರು ಅಗ್ನಿಶಾಮಕ ವಾಹನಗಳು ಮುಂಜಾನೆವರೆಗೂ ಶ್ರಮಿಸಿ ಬೆಂಕಿ ನಂದಿಸಿವೆ. ಗೋದಾಮಿನಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿಯಿಂದ ಲಕ್ಷಾಂತರ ರೂ. ಮೌಲ್ಯದ ಪೀಠೋಪಕರಣಗಳು, ಮರದ ವಸ್ತುಗಳು, ಯಂತ್ರಗಳು ಸುಟ್ಟುಹೋಗಿವೆ. ಗೋದಾಮಿನ ಮಾಲೀಕ ಕೇಶವ ಮೂರ್ತಿಯವರು ದೂರು ನೀಡಿದ್ದು, ಮೈಕೋ ಲೇಔಟ್ ಪೊಲೀಸ್ ಇನ್ಸ್ ಪೆಕ್ಟರ್ ಅಜಯ್ ಅವರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

fire on godown short circuit ಫರ್ನೀಚರ್ ಪೀಠೋಪಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ