’ನಾವು ಬೀಗುವುದಿಲ್ಲ ಅವಲೋಕಿಸುತ್ತೇವೆ’

CT Ravi reaction about election result

18-12-2017

ಚಿಕ್ಕಮಗಳೂರು: ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಅಲ್ಲಿನ ಜನತೆ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ ಎಂದು, ಶಾಸಕ ಸಿ.ಟಿ ರವಿ ಹೇಳಿದ್ದಾರೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಗೆಲುವಿನ ಹಿನ್ನೆಲೆ, ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು, ಜಿಲ್ಲಾ ಬಿಜೆಪಿ ಕಚೇರಿಯಿಂದ ಆಜಾದ್ ಪಾರ್ಕ್ ವರೆಗೂ ಶಾಸಕ ಸಿ.ಟಿ.ರವಿಯನ್ನು ಕಾರ್ಯಕರ್ತರು ಹೊತ್ತು ಜೈಕಾರ ಕೂಗಿ ಸಂಭ್ರಮಿಸಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಸಿ.ಟಿ ರವಿ ಅವರು, ಕರ್ನಾಟಕದ ಜನತೆ ಪರವಾಗಿ ನಾನು ಅಭಿನಂದನೆ  ತಿಳಿಸುತ್ತೇನೆ ಎಂದರು. ರಾಷ್ಟ್ರ ಕಟ್ಟುವ ಪ್ರಧಾನಿ ಕಾರ್ಯಕ್ಕೆ ಜನರು ಕೊಟ್ಟ ಶಕ್ತಿ ಇದು, ಈ ಸಂದರ್ಭದಲ್ಲಿ ನಾವು ಬೀಗುವುದಿಲ್ಲ, ಅತ್ಯಂತ ಸೂಕ್ಷ್ಮವಾಗಿ ಮತ್ತು ಅವಲೋಕನ ಮಾಡುತ್ತಾ, ಮುಂದೆ ಕರ್ನಾಟಕದ ಗೆಲುವಿಗೆ ಯಾವ ರೀತಿ ಕಾರ್ಯ ಯೋಜನೆ ಮಾಡಬಹುದು ಎಂದು ನೋಡುತ್ತೇವೆ ಎಂದಿದ್ದಾರೆ. ಈ ಗೆಲುವು ಕರ್ನಾಟಕದ ಕಾರ್ಯಕರ್ತರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದೆ, ವಿರೋಧಿಗಳ ಸಾಮಾರ್ಥ್ಯ ನಾವು ಕಡೆಗಣಿಸುವುದಿಲ್ಲ. ಅವರಿಗಿಂತ ಶಕ್ತಿಶಾಲಿಯಾಗಿ ಪಕ್ಷವನ್ನು ತೆಗೆದುಕೊಂಡು ಹೋಗುತ್ತವೆ ಎಂದರು.


ಸಂಬಂಧಿತ ಟ್ಯಾಗ್ಗಳು

CT Ravi Chikmagalur ಆಶೀರ್ವಾದ ಅಭಿನಂದನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ