‘ಬಿಜೆಪಿಯಿಂದ ಹೋಗುವವರು ಯಾರೂ ಇಲ್ಲ’18-12-2017

ಬೆಂಗಳೂರು: ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ನಿರೀಕ್ಷಿತ ಎಂದು, ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಜಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯ ನಂತರ ಮಾತನಾಡಿದ ಸೋಮಣ್ಣ, ನಮ್ಮ ನಾಯಕರಾದ ಪ್ರಧಾನಿ ‌ಮೋದಿಯವರ ನಾಯಕತ್ವದ ಬಗ್ಗೆ ಜನ ಇಟ್ಟಿರುವ ವಿಶ್ವಾಸದ ದ್ಯೋತಕ ಇದು ಎಂದರು. ಪಶ್ಚಿಮ‌ ಬಂಗಾಳ ಒಂದನ್ನು ಹೊರತು ಪಡಿಸಿ ಉಳಿದೆಲ್ಲಾ ಕಡೆ ಬಿಜೆಪಿಯ ಕಮಲ ಅರಳುತ್ತಿದೆ, ಗುಜರಾತ್ ಜನರಿಗೆ ಎಷ್ಟು ಸಂತೋಷವಾಗಿದೆಯೋ ನಮಗೂ ಅಷ್ಟೇ ಸಂತೋಷವಾಗಿದೆ ಎಂದು ಹೇಳಿದರು. ಇನ್ನು 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಇದು ನೇರ ಪರಿಣಾಮ ಬೀರುತ್ತದೆ ಎಂದು ಹೇಳಿದರು. ಅಲ್ಲದೇ ಬಿಜೆಪಿಯಿಂದ ಹೊರ ಹೋಗುವವರು ಯಾರೂ ಇರೋದಿಲ್ಲ, ಬೇರೆ ಪಕ್ಷದಿಂದ ಇಲ್ಲಿಗೆ ಬರುತ್ತಾರೆ ಎಂದು ನುಡಿದರು. 


ಸಂಬಂಧಿತ ಟ್ಯಾಗ್ಗಳು

V.Somanna gujarat election ಸಂತೋಷ ಪಶ್ಚಿಮ‌ ಬಂಗಾಳ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ