‘ಮತಯಂತ್ರಗಳ ಬಗ್ಗೆ ಈಗಲೂ ಶಂಕೆ’-ಸಿಎಂ

siddaramaiah reaction on election result

18-12-2017

ಯಾದಗಿರಿ: ಗುಜರಾತ್ನಲ್ಲಿ ಗೆದ್ದು ಸೋತಿದ್ದೇವೆ ಎಂದು, ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗುಜರಾತ್ ಚುನಾವಣಾ ಫಲಿತಾಂಶದ ಕುರಿತು, ಯಾದಗಿರಿ ನಗರದ ಸರ್ಕ್ಯೂಟ್ ಹೌಸ್'ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಗುಜರಾತ್ ನಲ್ಲಿ ಪಕ್ಷದ ಫಲಿತಾಂಶ ಸುಧಾರಿಸಿದೆ. ಗುಜರಾತ್, ಹಿಮಾಚಲ ಪ್ರದೇಶದ ಫಲಿತಾಂಶ ರಾಜ್ಯದ ಮೇಲೆ ಪ್ರಭಾವ ಬೀರಲ್ಲ ಎಂದಿದ್ದಾರೆ.

ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಬಗ್ಗೆ ಈಗಲೂ ಶಂಕೆಯಿದೆ, ಕಳೆದ ಬಾರಿಗೆ ಹೋಲಿಸಿದರೆ ಕಾಂಗ್ರೆಸ್ ಫಲಿತಾಂಶ ಸುಧಾರಿಸಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಸಿಬಿಐ, ಐಟಿ ದಾಳಿ ಮೂಲಕ ಭಯ ಹುಟ್ಟಿಸುವ ಯತ್ನ ನಡೆಯಿತು, ಗುಜರಾತ್ ಕಾಂಗ್ರೆಸ್ ನಲ್ಲಿ ಪ್ರಾದೇಶಿಕ ಮಟ್ಟದ ನಾಯಕರ ಅವಶ್ಯಕತೆಯಿದೆ ಎಂದಿದ್ದು, ಪ್ರಧಾನಿ ಮೋದಿಯವರಿಗೂ ಅಭಿನಂದನೆ, ರಾಹುಲ್ ಗಾಂಧಿ ಅವರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಗುಜರಾತ್'ನಲ್ಲಿ ಕಾಂಗ್ರೆಸ್ ಪಕ್ಷದ ನೆಟ್ ವರ್ಕ್ ಕೊರತೆ ಎದ್ದು ಕಾಣುತ್ತಿದೆ, ಶಂಕರ್ ಸಿಂಗ್ ವಘೇಲಾ ಪಕ್ಷ ಬಿಟ್ಟು ಹೋಗಿದ್ದು ಪರಿಣಾಮ ಬೀರಿದೆ ಎಂದು ಹೇಳಿದರು. ಇನ್ನು ರಾಜ್ಯದಲ್ಲಿ 150+ ಗೆಲ್ಲುತ್ತೇವೆ ಎಂದು ಬಿಜೆಪಿ ಭ್ರಮೆಯಲ್ಲಿದೆ. ರಾಜ್ಯದಲ್ಲಿ ಮೋದಿ ಮತ್ತು ಷಾ ತಂತ್ರಗಾರಿಕೆ ನಡೆಯಲ್ಲ, ನಾವೇ ಸ್ಪಷ್ಟ ಬಹುಮತದಿಂದ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದಿದ್ದಾರೆ. ಜನರು ಬಿಜೆಪಿ ಪರವಾಗಿಲ್ಲ ಎಂದು ನಿನ್ನೆ‌ ನಡೆದ ಘಟನೆ ಸಾಕ್ಷಿಯಾಗಿದೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಸಭೆಯಲ್ಲಿ ಖಾಲಿ ಖುರ್ಚಿಗಳೇ ಇದಕ್ಕೆ ಸಾಕ್ಷಿ, ಅದಲ್ಲದೇ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲೂ ಖಾಲಿ ಖುರ್ಚಿಗಳು ಕಂಡಿದ್ದವು ಎಂದರು. ಇನ್ನು  ರಾಜ್ಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆಯ ಪ್ರಶ್ನೆ ಬರಲ್ಲ, ಕಳೆದ ಬಾರಿಗಿಂತ ಜೆಡಿಎಸ್ ಕಡಿಮೆ ಸ್ಥಾನ ಗೆಲ್ಲುತ್ತೆ, ಇದು ಜೆಡಿಎಸ್'ನವರಿಗೂ ಗೊತ್ತು ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ