‘ಸರ್ವಾಧಿಕಾರಿ ಧೋರಣೆ ದೇಶದಲ್ಲಿ ಸಹಿಸಲ್ಲ’18-12-2017 304

ಮಂಗಳೂರು: ಪ್ರಧಾನಿ ಮೋದಿ ಅವರ ಅಬ್ಬರದ ಚುನಾವಣಾ ಪ್ರಚಾರ ಸೂಕ್ತ ರೀತಿಯಲ್ಲಿ ವರ್ಕ್ ಔಟ್ ಆಗಿಲ್ಲ ಎಂದು, ಗುಜಾರಾತ್ ಚುನಾವಣೆ ಫಲಿತಾಂಶ ಕುರಿತು ಸಚಿವ ಯು.ಟಿ.ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರಿನಲ್ಲಿಂದು ಮಾತನಾಡಿದ ಅವರು, ರಾಜಕೀಯ ಬದಲಾವಣೆಯ ಬಿರುಗಾಳಿ ಗುಜರಾತ್ ನಿಂದ ಪ್ರಾರಂಭವಾಗಿದೆ. ಸತ್ಯ ಮೇವ ಜಯತೆ ಎಂಬುದು ಗುಜರಾತ್ ಚುನಾವಣೆಯಲ್ಲಿ ಸಾಬೀತಾಗಿದೆ, ಪ್ರಧಾನಿ ಮೋದಿ ಅವರ ಪ್ರತಿಷ್ಠೆಯ ಕಣವಾದ ಗುಜರಾತ್ ನಲ್ಲೇ ಕಾಂಗ್ರೆಸ್ ಹಿಂದಿಗಿಂತ ಹೆಚ್ಚಿನ ಬಲ ಪಡೆದುಕೊಂಡಿದೆ ಎಂದಿದ್ದಾರೆ.

ಇನ್ನು ಮತಯಂತ್ರದಲ್ಲಿ‌ ದೋಷ ವಿಚಾರದ ಕುರಿತು ಮಾತನಾಡಿದ ಅವರು, ಬಹಳಷ್ಟು ದೇಶಗಳು ಮತ್ತೆ ಬ್ಯಾಲೆಟ್ ಪೇಪರ್ ಗೆ ಹೋದ‌ ನಿದರ್ಶನವಿದೆ, ಮತಯಂತ್ರದ ಕುರಿತಾಗಿ ಯಾವತ್ತೂ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ. ಗುಜರಾತ್ ‌ಚುನಾವಣೆ ಹಲವರ ಭ್ರಮೆಯನ್ನು ಕಳಚಿದೆ, ಸಾಮಾಜಿಕ ಜಾಲತಾಣಗಳ ಪ್ರಚಾರ ವರ್ಕ್ ಔಟ್ ಆಗಲ್ಲ‌ ಎಂಬುದನ್ನು ಫಲಿತಾಂಶ ತೋರಿಸಿದೆ ಎಂದ ಅವರು, ದೇಶದ ಪ್ರಧಾನಿ‌ಯ ರಜನಿಕಾಂತ್ ಸ್ಟೈಲ್ ಗೆ ಜನಮಾರುಹೋಗಿಲ್ಲ, ಸರ್ವಾಧಿಕಾರಿ ಧೋರಣೆ ದೇಶದಲ್ಲಿ ಸಹಿಸೋದಿಲ್ಲ ಎಂದರು. ಅಲ್ಲದೇ ರಾಜ್ಯದಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.ಸಂಬಂಧಿತ ಟ್ಯಾಗ್ಗಳು

U. T. Khader gujarat election ರಾಜಕೀಯ ಫಲಿತಾಂಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ