ವಿದ್ಯಾರ್ಥಿಗಳಿಬ್ಬರು ನೀರುಪಾಲು

2 students died in river

18-12-2017

ಬೆಳಗಾವಿ: ವಾಲಿಬಾಲ್ ಆಡಿತ್ತಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿರುವ ದಾರುಣ ಘಟನೆಯು, ಬೆಳಗಾವಿಯಲ್ಲಿ ನಡೆದಿದೆ. ರೋಹನ್(14) ಮತ್ತು ಜೇಮ್ಸ್ ಡಿಸೋಜ್(15)ಮೃತ ದುರ್ದೈವಿಗಳು. ಬೆಳಗಾವಿಯ ಡಿವೈನ್ ಪಾರ್ಕ್ ಶಾಲೆಯಲ್ಲಿ ಪ್ರವಾಸ ಆಯೋಜಿಸಿದ್ದು, ಮಲಪ್ರಭಾ ನದಿ ಜಾಗಕ್ಕೆ ವಿದ್ಯಾರ್ಥಿಗಳನ್ನು ಕೊರೆದುಕೊಂಡು ಹೋಗಿದ್ದಾರೆ. ಇನ್ನು ಈ ವೇಳೆ ವಿದ್ಯಾರ್ಥಿಗಳು ವಾಲಿಬಾಲ್  ಆಡುತ್ತಿದ್ದು, ಬಾಲ್ ನದಿಯಲ್ಲಿ ಬಿದ್ದಿದೆ, ಅದನ್ನು ತರಲು ಹೋದ ರೋಹನ್ ಮತ್ತು ಡಿಸೋಜ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

students Malaprabha ಖಾನಾಪುರ ವಾಲಿಬಾಲ್ 


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ