‘ಜಾತಿ ರಾಜಕಾರಣಕ್ಕೆ ಜನ ಬೆಂಬಲ ಕೊಡಲಿಲ್ಲ’18-12-2017 232

ಶಿವಮೊಗ್ಗ: ದೇಶದ ಜನರ ಮನಸ್ಥಿತಿ ಹೇಗಿದೆ ಅನ್ನೋದು ತೋರಿಸುವ ಚುನಾವಣೆ ಇದಾಗಿದೆ ಎಂದು, ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಗುಜರಾತ್ ಚುನಾವಣಾ ಫಲಿತಾಂಶ ಮುಂಬರುವ ಚುನಾವಣೆಗಳಲ್ಲಿ, ಪ್ರಮುಖ ಪಾತ್ರ ವಹಿಸಲಿದೆ ಎಂದರು. ಜಿಎಸ್ ಟಿ, ನೋಟ್ ಬ್ಯಾನ್, ಮಾಡಿದ್ದರೂ ಬಿಜೆಪಿಗೆ ಜನ ಬೆಂಬಲ ಸಿಕ್ಕಿದೆ. ಜನ ತಮ್ಮ ವ್ಯಾಪಾರಕ್ಕೆ, ಜೀವನಕ್ಕೆ ತೊಂದರೆ ಆದರೂ ಸಹ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಜಾತಿ ರಾಜಕಾರಣಕ್ಕೆ ಜನ ಬೆಂಬಲ ಕೊಡಲಿಲ್ಲ, ರಾಷ್ಟ್ರೀಯವಾದಕ್ಕೆ ಬೆಂಬಲ ನೀಡಿದ್ದಾರೆ ಎಂದಿದ್ದು, ಪಟೇಲ್ ಜಾತಿ ಎತ್ತಿ ಕಟ್ಟಿದರೂ ಫಲಿತಾಂಶ ಸಮಾಧಾನ ತಂದಿದೆ, ಕಾಂಗ್ರೆಸ್ ಜಾತಿ ರಾಜಕಾರಣಕ್ಕೆ ಮಂಗಳ ಹಾಡಿದ್ದಾರೆ ಎಂದರು. ಇನ್ನು ಗುಜರಾತ್ ಚುನಾವಣಾ ಫಲಿತಾಂಶ ರಾಜ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಬಿಜೆಪಿ ಎರಡು ಕ್ಷೇತ್ರದಲ್ಲಿ ಮುನ್ನಡೆ ಇದ್ದು, ಈಶ್ವರಪ್ಪ ಮನೆ ಮುಂದೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ