ಚಿನ್ನದ ಸರಕ್ಕಾಗಿ ಮಹಿಳೆ ಕೊಲೆ

Woman murder for gold chain

18-12-2017

ರಾಮನಗರ: ಮಹಿಳೆಯೊಬ್ಬರ ಚಿನ್ನದ ಸರ ಕದ್ದು, ನಂತರ ಆಕೆಯನ್ನು ಕೊಲೆ ಮಾಡಿರುವ ದಾರುಣ ಘಟನೆಯು ರಾಮನಗರದಲ್ಲಿ ನೆಡದಿದೆ. ಶಕುಂತಲಾ(45) ಕೊಲೆಯಾಗಿರುವ ಮಹಿಳೆ ಎಂದು ಗುರುತಿಸಲಾಗಿದೆ. ರಾಮನಗರ ತಾಲ್ಲೂಕಿನ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಶಕುಂತಲಾ ಅವರು ಇಂದು ಬೆಳಿಗ್ಗೆ, ತಮ್ಮ ಜಮೀನಿನಲ್ಲಿದ್ದ ದನ ಹಿಡಿದುಕೊಂಡು ಹೋಗುವ ಸಂದರ್ಭದಲ್ಲಿ ಕಳ್ಳರು, ಈ ಕೃತ್ಯ ಎಸಗಿದ್ದಾರೆ. ದುಷ್ಕರ್ಮಿಗಳು ಸರ ಕಿಳಲು ಬಂದಾಗ ವಿರೋಧ ಒಡ್ಡಿದ್ದರಿಂದ, ಈ ವೇಳೆ ಚಾಕುವಿನಿಂದ ತಿವಿದು ಕೊಲೈಗೈದು ಪರಾರಿಯಾಗಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder attack on women ವಿರೋಧ ಕೊಲೈಗೈದು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ