ಬಡಜನರಿಗೆ ‘ಕುಮಾರಣ್ಣ ಬಾಂಡ್’

what is kumaranna Bond

15-12-2017

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿರುವ ಅವರ ಅಭಿಮಾನಿಗಳಿಬ್ಬರು “ಕುಮಾರಣ್ಣ ಬಾಂಡ್” ಎಂಬ ವಿಶೇಷ ವಿಮಾ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ನಾಳೆ 59ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದರ ಪ್ರಯುಕ್ತ ಅವರ ಅಭಿಮಾನಿಗಳಾದ ರಾಜ್ಯ ಯುವ ಜನತಾದಳದ ಉಪಾಧ್ಯಕ್ಷ ಸೈಯ್ಯದ್ ಶಾಹಿದ್ ಮತ್ತು ಬೆಂಗಳೂರು ನಗರ ಯುವ ಜನತಾದಳದ ಉಪಾಧ್ಯಕ್ಷ ರಾಜೇಂದ್ರ ಸಿಂಗ್ “ಕುಮಾರಣ್ಣ ಬಾಂಡ್” ಯೋಜನೆಯನ್ನು ಪರಿಚಯಿಸುತ್ತಿದ್ದಾರೆ. ಕುಮಾರಸ್ವಾಮಿ ಹುಟ್ಟುಹಬ್ಬದ ದಿನವಾದ ನಾಳೆ ಜನಿಸಿದ ಮಕ್ಕಳಿಗಷ್ಟೇ ಈ ಬಾಂಡ್ ಲಭ್ಯವಾಗಲಿದೆ. ಪೋಷಕರು ಮಗುವಿನ ಜನ್ಮ ದೃಢೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳು ಮಾತ್ರ ಈ ಯೋಜನೆಗೆ ಅರ್ಹರು. ಈ ಬಾಂಡ್ 6 ವರ್ಷಕ್ಕೆ 10 ಸಾವಿರ ರೂ., 12 ವರ್ಷಗಳಿಗೆ 20 ಸಾವಿರ, 18 ವರ್ಷಕ್ಕೆ 40ಸಾವಿರ, 24 ವರ್ಷಕ್ಕೆ 80ಸಾವಿರ ರೂ. ಮೌಲ್ಯ ಹೊಂದಲಿದೆ ಎಂದು ಪ್ರಕಟಿಸಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ