ಚುನಾವಣಾ ಕಣಕ್ಕೆ ಮತ್ತೊಂದು ಪಕ್ಷ

New political party to participate in election

15-12-2017

ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲಿ ಮತ್ತೊಂದು ಪಕ್ಷ ಉದಯವಾಗಲಿದೆ. ಮಹದಾಯಿ, ಕಳಸಾ ಬಂಡೂರಿ ಹೋರಾಟ ಹಿನ್ನೆಲೆ, ಕಳಸಾ ಬಂಡೂರಿ ಕೇಂದ್ರ ಯುವ ಸಮಿತಿ ಅಧ್ಯಕ್ಷ ವಿಜಯ್ ಕುಲಕರ್ಣಿ ಈ ಹೇಳಿಕೆ ನೀಡಿದ್ದಾರೆ. ರಾಜ್ಯದ ಮೂರು ಪಕ್ಷಗಳ ನಾಯಕರ ಮಹದಾಯಿ ಕಳಸಾ ಬಂಡೂರಿ ಯೋಜನೆಗೆ ಎಳ್ಳುನೀರು ಬಿಟ್ಟಿದ್ದಾರೆ, ಹೀಗಾಗಿ ನಮ್ಮ ಬೇಡಿಕೆಯನ್ನು ನಾವೇ ಈಡೇರಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಹೀಗಾಗಿ ಜನಸಾಮಾನ್ಯರ ಪಕ್ಷ ಉದಯವಾಗಲಿದೆ ಎಂದು ಹೇಳಿದ್ದಾರೆ. ಎಲ್ಲಾ 224 ಕ್ಷೇತ್ರಗಳಲ್ಲಿ ನಮ್ಮ ರೈತ ನಾಯಕರು ಸ್ಪರ್ಧೆ ಮಾಡಲಿದ್ದಾರೆ, ಮಹದಾಯಿ ಹೋರಾಟಗಾರ ಸಮ್ಮುಖದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇನ್ನು ಇದೇ ವೇಳೆ ಸಾಹಿತಿ ಚಂಪಾ ಮಾತನಾಡಿ, ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷಗಳ ಅಗತ್ಯತೆ ಇದೆ, ಯಾಕೆಂದರೆ ಈಗಿರುವ ರಾಜಕೀಯ ಪಕ್ಷಗಳು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ, ನಾನು ಒಬ್ಬ ರೈತನ ಮಗ, ಕರ್ನಾಟಕದ ಜನಪರ ಶಕ್ತಿಗಳು ಹಾಗೂ ವ್ಯಕ್ತಿಗಳು ಪಕ್ಷಾತೀತವಾಗಿ ಹೋರಾಟ ಮಾಡಬೇಕು. ಜನಸಾಮಾನ್ಯರ ಪಕ್ಷಕ್ಕೆ ಎಲ್ಲಾರು ಕೈಜೋಡಿಸೋಣ ಎಂದರು. ಹೊಸ ಪಕ್ಷಕ್ಕೆ ನಾನು ಸ್ವಾಗತ ಕೋರುತ್ತೇನೆ, ನಾನು ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತೇನೆ, ರೈತ ಹೋರಾಟಗಾರರಿಗೆ ನನ್ನ ಬೆಂಬಲವಿದೆ, ಜನವರಿ 15ರ ಒಳಗೆ ಕಳಸಾ ಬಂಡೂರಿ ಯೋಜನೆ ಜಾರಿ ಮಾಡದೇ ಹೋದರೆ ಮುಂದಿನ ಹೋರಾಟ ಕೈಗೊಳ್ಳತ್ತೇವೆ ಎಂದು ಎಚ್ಚರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ellection writer champa ಮಹದಾಯಿ ಚಂಪಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ