ನಂಜನಗೂಡು, ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಜಯಭೇರಿ

Kannada News

13-04-2017

ಬೆಂಗಳೂರು :- 2018ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗಿದ್ದ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದು ,ಪ್ರತಿಪಕ್ಷ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಡುವಿನ ಪ್ರತಿಷ್ಠೆಯ ಕಣವಾಗಿದ್ದ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನೊಂದಿಗೆ ಮುಂದಿನ ಮಹಾಸಮರಕ್ಕೆ ರಣಕಹಳೆ ಮೊಳಗಿಸಿದೆ.

ಇನ್ನು ಎರಡು ಕ್ಷೇತ್ರಗಳಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿಗೆ ಫಲಿತಾಂಶ ಭಾರೀ ಮರ್ಮಾಘಾತ ನೀಡಿದೆ. ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿ ದಲಿತರ ಸ್ವಾಭಿಮಾನದ ಟ್ರಂಪ್ ಕಾರ್ಡ್ ಬಳಸಿದ್ದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್‍ಗೂ ಹಿನ್ನಡೆಯಾಗಿದೆ.

ಇತ್ತ ಪತಿಯ ಸಾವಿನ ಅನುಕಂಪವನ್ನೇ ನೆಚ್ಚಿಕೊಂಡು ಕಣಕ್ಕಿಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ದಿ.ಎಚ್.ಎಸ್.ಮಹದೇವಪ್ರಸಾದ್‍ರ ಪತ್ನಿ ಗೀತಾ ಮಹದೇವಪ್ರಸಾದ್ ಭರ್ಜರಿ ಗೆಲುವು ಸಾಧಿಸಿದ್ದಾರೆ.

 ನಂಜನಗೂಡು :

ಕಾಂಗ್ರೆಸ್ – ಕಳಲೆ ಕೇಶವಮೂರ್ತಿ- 86,212 (ಗೆಲುವು)

ಬಿಜೆಪಿ -ವಿ.ಶ್ರೀನಿವಾಸ್ ಪ್ರಸಾದ್ – 64,878(ಸೋಲು)

ಗೆಲುವಿನ ಅಂತರ : 21,334

> ಗುಂಡ್ಲುಪೇಟೆ :

ಕಾಂಗ್ರೆಸ್-ಗೀತಾಮಹದೇವಪ್ರಸಾದ್-90,258 (ಗೆಲುವು)

ಬಿಜೆಪಿ – ನಿರಂಜನ್‍ಕುಮಾರ್-79,381 (ಸೋಲು)

ಗೆಲುವಿನ ಅಂತರ- 10,877

ಮೈಸೂರು

ಜೀವನದಲ್ಲಿ ಮೊತ್ತಮೊದಲ ಬಾರಿ ಚುನಾವಣೆಯಲ್ಲಿ ಸೋಲನುಭವಿಸಿದ ಶ್ರೀನಿವಾಸಪ್ರಸಾದ್ ಅವರು ತಾನು ಇನ್ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಶತಥ ಮಾಡಿದ್ದಾರೆ. ನಂಜನಗೂಡು ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ತಾನು ಹೀನಾಯ ಸೋಲನುಭವಿಸಿದ ಬೆನ್ನಲ್ಲೇ ಶ್ರೀನಿವಾಸಪ್ರಸಾದ್ ಈ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್'ನ ಕಳಲೆ ಕೇಶವಮೂರ್ತಿಯವರು 21,334 ಮತಗಳ ಅಂತರದಿಂದ ಚುನಾವಣೆ ಗೆದ್ದಿದ್ದಾರೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ