10 ಮಂದಿ ದರೋಡೆಕೋರರ ಬಂಧನ

10 Extortioner arrested

15-12-2017

ಬೆಂಗಳೂರು: ಕೆಲಸ ಮುಗಿಸಿಕೊಂಡು ರಾತ್ರಿ ವೇಳೆ ಒಂಟಿಯಾಗಿ ಮನೆಗೆ ನಡೆದುಕೊಂಡು ಹೋಗುತ್ತಿದ್ದವರನ್ನು ಅಡ್ಡಗಟ್ಟಿ, ಚಾಕು ತೋರಿಸಿ ಬೆದರಿಸಿ ಮೊಬೈಲ್, ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ 4 ತಂಡದ 10 ಮಂದಿ ಸುಲಿಗೆಕೋರರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ 4 ಪ್ರತ್ಯೇಕ ಸುಲಿಗೆ ತಂಡದ 10 ಮಂದಿ ಆರೋಪಿಗಳಿಂದ 3 ಲಕ್ಷ 50 ಸಾವಿರ ಮೌಲ್ಯದ 12 ಮೊಬೈಲ್‍ಗಳು, 1 ಲ್ಯಾಪ್‍ ಟಾಪ್, 4 ದ್ವಿಚಕ್ರ ವಾಹನಗಳು, 2 ಸಾವಿರ ನಗದು, ಡ್ರ್ಯಾಗರ್ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ.

ಉತ್ತರಹಳ್ಳಿಯ ರಾಮಾಂಜನೇಯ ನಗರದ ಸತೀಶ, ಪದ್ಮನಾಭ ನಗರದ ರಾಜೇಶ್ ಆಲಿಯಾಸ್ ಬಿಳಿಯ ಮೊದಲನೇ ತಂಡದ ಆರೋಪಿಗಳಾದರೆ, 2ನೇ ತಂಡದಲ್ಲಿ ಜೆಜೆ ನಗರದ ಮೊಹ್ಮದ್ ಅಫ್ರಿದ್, ಶಾಹೀದ್ ಖಾನ್, ಪಾದರಾಯನಪುರದ ಖಾಲೀದ್ ಖಾನ್, 2ನೇ ತಂಡದ ಸುಲಿಗೆ ಕೋರರಾಗಿದ್ದಾರೆ. ಬನಶಂಕರಿಯ ಪ್ರದೀಪ್, ಕೆಜಿ ನಗರದ ವೇಣುಗೋಪಾಲ್, ಶ್ರೀನಗರದ ವಿಕಾಸ್, 3ನೇ ತಂಡದವರಾದರೆ, 4ನೇ ತಂಡದಲ್ಲಿ ಹರಿಕಾಲೋನಿಯ ಹಾಸೀಫ್ ಪಾಷ, ನವಾಜ್ ಪಾಷ ಇದ್ದು, ಅವರಿಂದ ಸುಲಿಗೆ ನಡೆಸಿದ ನಗದು, ಮೊಬೈಲ್, ಲ್ಯಾಪ್‍ ಟಾಪ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ಅವರು ತಿಳಿಸಿದರು.

ಜಯನಗರದ ಸುತ್ತಮುತ್ತ ರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ಒಂಟಿಯಾಗಿ ಹೋಗುವರನ್ನು ಅಡ್ಡಗಟ್ಟಿ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಎಸಿಪಿ ಹೆಚ್. ಶ್ರೀನಿವಾಸ್ ಅವರ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಲಾಗಿದ್ದು, ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Gangstar Arrested ಲ್ಯಾಪ್‍ ಟಾಪ್‍ ವಿಶೇಷ ತಂಡ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ