ಬಾಗಲಕೋಟೆ ಜೆಡಿಎಸ್ ನಲ್ಲಿ ಭಿನ್ನಮತ ಸ್ಪೋಟ

JDS dissident explosion in Bagalkot

15-12-2017

ಬಾಗಲಕೋಟೆ: ಬಾಗಲಕೋಟೆ ಜಲ್ಲೆಯ ಜೆಡಿಎಸ್ ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಜಿಲ್ಲಾಧ್ಯಕ್ಷರ ಬದಲಾವಣೆಗಾಗಿ ಜಗಳವಾಡಿದ ಜೆಡಿಎಸ್ ಕಾರ್ಯಕರ್ತರು, ಜೆಡಿಎಸ್ ಜಿಲ್ಲಾಧ್ಯಕ್ಷ ರವಿ ಹುಣಸ್ಯಾಳ ಬದಲಾವಣೆಗೆ ಆಗ್ರಹಿಸಿದ್ದಾರೆ. ಬಾಗಲಕೋಟೆ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರು ಪರಸ್ಪರ ಜಗಳವಾಡಿಕೊಂಡಿದ್ದಾರೆ. ಜೆಡಿಎಸ್ ವೀಕ್ಷಕರ ಆಗಮನದ ವೇಳೆಯೇ ಸಭೆಯಲ್ಲಿ ಗದ್ದಲ ನಡೆದಿದ್ದು, ಜಿಲ್ಲಾಧ್ಯಕ್ಷ ರವಿ ಹುಣಸ್ಯಾಳ ವಿರುದ್ಧ ಧಿಕ್ಕಾರದ ಕೂಗಿ ಆಕ್ರೋಶ ವ್ಯಕ್ತಪಡಿದ್ದಾರೆ. ಅಲ್ಲದೇ ನೂತನ ಅಧ್ಯಕ್ಷರ ನೇಮಕ ಮಾಡಬೇಕೆಂದು, ಜಿಲ್ಲೆಯ ಜೆಡಿಎಸ್ ನಾಯಕರು ಪಟ್ಟುಹಿಡಿದಿದ್ದಾರೆ. ಬಾಗಲಕೋಟೆಯ ಜೆಡಿಎಸ್ ಸಂಘಟನಾ ಸಭೆ ಗೊಂದಲದ ಗೂಡಾಗಿದ್ದು, ಪರಸ್ಪರ ತಮ್ಮ-ತಮ್ಮ ನಾಯಕರ ಪರ ಘೋಷಣೆಗೆ ಮುಂದಾದರು.


ಸಂಬಂಧಿತ ಟ್ಯಾಗ್ಗಳು

bagalkot JDS ಜಿಲ್ಲಾಧ್ಯಕ್ಷ ಬದಲಾವಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ