ಪ್ಲಾಸ್ಟಿಕ್ ಬಳಸಿದರೆ 5 ಸಾವಿರ ದಂಡ

NGT bans plastic items in towns

15-12-2017

ಗಂಗಾ ನದಿಯ ತಟದಲ್ಲಿರುವ ಪವಿತ್ರ ಕ್ಷೇತ್ರಗಳಾದ ಹರಿದ್ವಾರ ಮತ್ತು ಹೃಷಿಕೇಶದಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಸುಪ್ರೀಂಕೋರ್ಟ್‌ನ ಹಸಿರು ಪೀಠ ಆದೇಶ ಹೊರಡಿಸಿದೆ. ಪ್ಲಾಸ್ಟಿಕ್ ಕವರ್, ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಪ್ಲೇಟ್, ತಟ್ಟೆ, ಲೋಟ, ಚಮಚೆ ಇತ್ಯಾದಿ ವಸ್ತುಗಳನ್ನು ಈ ಎರಡೂ ನಗರಗಳಲ್ಲಿ ಬಳಸುವಂತಿಲ್ಲ. ಒಂದು ವೇಳೆ, ಯಾರಾದರೂ ಈ ಆದೇಶ ಉಲ್ಲಂಘಿಸಿದಲ್ಲಿ ಅವರಿಗೆ 5 ಸಾವಿರ ರೂಪಾಯಿಗಳ ದಂಡ ವಿಧಿಸಲಾಗುತ್ತದೆ. ಪ್ಲಾಸ್ಟಿಕ್ ಬಳಕೆ ನಿಷೇಧ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳಿಗೂ ದಂಡ ವಿಧಿಸಬಹುದು, ಎಂದು ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ನೇತೃತ್ವದ ಹಸಿರು ಪೀಠ ಹೇಳಿದೆ. ಇದರ ಜೊತೆಗೆ, ಮತ್ತೊಂದು ಪವಿತ್ರ ಕ್ಷೇತ್ರ ಉತ್ತರ ಕಾಶಿಯಲ್ಲೂ ಕೂಡ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಶೇಖರಣೆ ಮತ್ತು ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧಿಸಿ, ಈ ಹಿಂದೆಯೇ ಆದೇಶ ಹೊರಡಿಸಿದ್ದರೂ ಕೂಡ ಅದು ಸರಿಯಾಗಿ ಪಾಲನೆ ಆಗುತ್ತಿರಲಿಲ್ಲ. ಇದರಿಂದ ಗಂಗಾ ನದಿಯ ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಪರಿಸರವಾದಿ ಎಂ.ಸಿ.ಮೆಹ್ತಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.


ಸಂಬಂಧಿತ ಟ್ಯಾಗ್ಗಳು

Green Tribunal Ganga River ಪ್ಲಾಸ್ಟಿಕ್ ಹೃಷಿಕೇಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ